ಓಲಾದಿಂದ ಏಕಾಏಕಿ 4 ಸಾವಿರ ಟ್ಯಾಕ್ಸಿ ಚಾಲಕರು ಔಟ್!

Ola company immediately terminated 4 thousand taxi drivers!

27-08-2018

ಬೆಂಗಳೂರು: ಏಕಾಎಕಿ 4 ಸಾವಿರ ಚಾಲಕರನ್ನು ಕಪ್ಪು ಪಟ್ಟಿಗೆ ಸೇರಿಸಿರುವ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿರುವ ಓಲಾ ಕಂಪೆನಿಯು ಅವರನ್ನು ಸೇವೆಯಿಂದ ತೆಗೆದು ಹಾಕಿದೆ.

ನಗರದಾದ್ಯಂತ ಆ್ಯಪ್  ಆಧಾರಿತ ಟ್ಯಾಕ್ಸಿ ಸೇವೆ ನೀಡತ್ತಿರುವ ಓಲಾ ಕಂಪೆನಿಯು, ಗ್ರಾಹಕರ ಪ್ರತಿಕ್ರಿಯೆ ಆಧಾರದ ಮೇಲೆ 4 ಸಾವಿರ ಚಾಲಕರನ್ನು ಏಕಾಏಕಿ ಸೇವೆಯಿಂದ ತೆಗೆದು ಹಾಕಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಓಲಾವು ಗ್ರಾಹಕರೊಂದಿಗೆ ಚಾಲಕರು ಅಸಭ್ಯ ವರ್ತನೆ ಹಾಗೂ ಅಜಾಗರೂಕ ಚಾಲನೆ ಮಾಡಿರುವುದು ಸೇರಿ ಅನೇಕ ದೂರುಗಳು ಬಂದ ಚಾಲಕರ ಪಟ್ಟಿ ತಯಾರಿಸಿ ಕಪ್ಪು ಪಟ್ಟಿಗೆ ಸೇರಿಸಿ ವಜಾಗೊಳಿಸಲಾಗಿದೆ ಎಂದು ತಿಳಿಸಿದೆ.

ಓಲಾದ ಏಕಾಏಕಿ ನಿರ್ಧಾರದಿಂದ ಕಂಗಾಲಾಗಿರುವ ಚಾಲಕರುಗಳು ಓಲಾ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಯಾವುದೇ ಮಾಹಿತಿಯನ್ನು ಕೊಡದೆ ಏಕಾಏಕಿ ಟರ್ಮಿನೇಟ್ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಂಪೆನಿಯ ನಿರ್ಧಾರದಿಂದ ಕಷ್ಟಪಟ್ಟು ಸಾಲ ಮಾಡಿಕೊಂಡು ಕಾರು ಚಲಾಯಿಸುತ್ತಿದ್ದ ಎಷ್ಟೋ ಚಾಲಕರು ಬೀದಿಗೆ ಬಿದ್ದಿದ್ದಾರೆ.

ಕೇವಲ ಗ್ರಾಹಕರ ಪ್ರತಿಕ್ರಿಯೆ ಪಡೆದು ಸೇವೆಯಿಂದ ತೆಗೆಯುವುದು ಎಷ್ಟು ಸರಿ, ಈ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟವರನ್ನು ತೆಗೆದು ಹಾಕಬಹುದಾಗಿತ್ತು. ಯಾವುದೇ ಮಾಹಿತಿ ನೀಡದೇ ಕ್ಷುಲ್ಲಕ ವಿಚಾರಗಳಿಗೆ ಬಹುತೇಕ ಚಾಲಕರನ್ನು ಓಲಾವು ತೆಗೆದು ಹಾಕಿದೆ ಎಂದು ಚಾಲಕರೋರ್ವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Ola taxi drivers ವಿಚಾರ ಚಾಲಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ