ಬೆಂಗಳೂರಿನ ಈ ಭಾಗಗಳಲ್ಲಿರುವವರು ಎಚ್ಚರದಿಂದಿರಬೇಕಂತೆ?

Heavy Rain in Bangalore: How Many Are In Risk!

27-08-2018

ಬೆಂಗಳೂರು: ಬರುವ ಸೆಪ್ಟೆಂಬರ್ ತಿಂಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆ ಬೀಳುವ ಮುನ್ಸೂಚನೆ ಹಿನ್ನೆಲೆಯಲ್ಲಿ 60 ಪ್ರದೇಶಗಳನ್ನು ಆಪಾಯಕಾರಿ ಎಂದು ಗುರುತಿಸಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಹವಾಮಾನ ಇಲಾಖೆ ನೀಡಿರುವ ಮಾಹಿತಿ ಅಧರಿಸಿ ಪಾಲಿಕೆ ಅಯುಕ್ತರಿಂದ 60 ಆಪಾಯಕಾರಿ ಪ್ರದೇಶಗಳನ್ನು ಗುರುತು ಮಾಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕಳೆದ ಬಾರಿ ಮಳೆ ಬಂದಾಗ ಅವನೀನಗರ, ಬಿಟಿಎಂ ಲೇಔಟ್ ಸೇರಿದಂತೆ ಹೆಚ್‍ಎಂಟಿ ಲೇಔಟ್‍ನ ಬಹುತೇಕ ಕಡೆ ಮಳೆ ನೀರಿನಿಂದ ಮುಳುಗಡೆಯಾಗಿದ್ದವು. ಈ ಬಾರಿಯೂ ಅತಿವೃಷ್ಟಿಯಾದರೆ ಎಂದು ಕೆಲವೊಂದು ಸೂಕ್ಷ್ಮ ಪ್ರದೇಶಗಳಲ್ಲಿ ವಾಸಿಸುವವರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಆಪಾಯಕಾರಿ ಪ್ರದೇಶಗಳು: ಕಿನೋ ಚಿತ್ರಮಂದಿರದ ಅಂಡರ್ ಪಾಸ್, ಶಿವಾನಂದ ಸರ್ಕಲ್,  ಓಕಳಿಪುರಂ ಅಂಡರ್ ಪಾಸ್, ಕೋರಮಂಗಲ, ಈಜಿಪುರ, ಶಾಂತಿನಗರ, ಕೆಎಸ್.ಆರ್.ಟಿ.ಸಿ ಡಿಪೋ, ಮಾಗಡಿ ರಸ್ತೆ, ವಿಜಯನಗರ, ಬಾಪೂಜಿನಗರ, ಗಾಳಿ ಆಂಜನೇಯಸ್ವಾಮಿ ದೇವಸ್ಥಾನ, ನಾಯಂಡಹಳ್ಳಿ, ಗಂಗೊಂಡನಹಳ್ಳಿ, ಹೆಚ್.ಎಸ್.ಆರ್ ಲೇಔಟ್, ಥಣಿಸಂದ್ರ, ಎಲಿಮೆಂಟ್ಸ್ ಮಾಲ್, ಕೋಡಿ ಚಿಕ್ಕನಹಳ್ಳಿ, ಆನಂದ್ ರಾವ್ ಸರ್ಕಲ್, ಹಲಸೂರು ಡಬ್ಬಲ್ ರೋಡ್, ಶಂಕರಮಠ,  ಕೆಂಪೇಗೌಡ ಲೇಔಟ್, ವಿಲ್ಸನ್ ಗಾರ್ಡನ್, ಅರಕೆರೆ, ಕುರಬರಹಳ್ಳಿ, ಹೆಚ್.ಆರ್.ಬಿ.ಆರ್. ಲೇಔಟ್, ನಂದಿನಿ ಲೇಔಟ್, ಲಗ್ಗೆರೆ ಎಂದು ಗುರುತಿಸಲಾಗಿದೆ ಇಲ್ಲಿ ಮನೆಯಿರುವವರು ಅದರಲ್ಲೂ ಕೆಳ ಮಹಡಿಗಳ ಮನೆಯವರು ಎಚ್ಚರದಿಂದ ಇರುವುದು ಒಳ್ಳೆಯದು ಎಂದು ತಿಳಿಸಲಾಗದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ