ಎಚ್ಚರ...ರಾತ್ರೋ ರಾತ್ರಿ ಪೆಟ್ರೋಲ್ ಕದೀತಾರೆ!

petrol thieves at bangalore: complaint lodged against them?

27-08-2018

ಬೆಂಗಳೂರು: ರಸ್ತೆ ಬದಿ ಅಥವಾ ಮನೆ ಮುಂದೆ ನಿಲ್ಲಿಸಿದ್ದ ಬೈಕ್‍ಗಳ ಪಟ್ರೋಲ್ ಕದಿಯುತ್ತಿದ್ದ ಕಿಡಿಗೇಡಿಗಳು ಅಪಾರ್ಟ್‍ಮೆಂಟ್‍ನ ನೆಲಮಹಡಿಗೆ ನುಗ್ಗಿ ಪೆಟ್ರೋಲ್ ಕಳವು ಮಾಡಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಯಶವಂತಪುರ ಬಳಿಯ ಎಲ್ಐಸಿ ಕಾಲೋನಿ ಬಳಿ ಎ.ಟಿ.ಕಾಲೋನಿ ಬಳಿಯ ಅಪಾರ್ಟ್ ಮೆಂಟ್ ಬಳಿ ನೆಲಮಹಡಿಯ ಪಾರ್ಕಿಂಗ್ ಸ್ಥಳಕ್ಕೆ ಬಂದ ಕಳ್ಳ ಬಾಟೆಲ್ ಹಿಡಿದು ಒಳ ಬಂದಿದ್ದಾನೆ. ಸುತ್ತಮುತ್ತ ಯಾರು ಇಲ್ಲದಿರುವುದನ್ನು ಗಮನಿಸಿದ ಆತ ರಾಯಲ್ ಎನ್ ಫೀಲ್ಡ್ ಬೈಕೊಂದರಲ್ಲಿ ಇದ್ದ ಪೆಟ್ರೋಲ್ ಕ್ಷಣ ಮಾತ್ರದಲ್ಲಿ ಕದ್ದು ಪರಾರಿಯಾಗಿದ್ದಾನೆ. ಈ ಸಂಬಂಧ ಬೈಕ್ ಮಾಲೀಕರು ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Petrol thief ಕ್ಯಾಮೆರಾ ಮಾಲೀಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ