ಸ್ಯಾಡ್ ಮ್ಯೂಸಿಕ್ ಕೇಳುವ ಮುನ್ನ ಯೋಚಿಸಿ..!

Kannada News

01-06-2017

ಸಂಗೀತ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ… ಸಂಗೀತ ಕೇಳುತ್ತಿದ್ರೆ ನಮ್ಮನ್ನು ನಾವೇ ಮರೆಯುತ್ತೇವೆ.  ಖುಷಿಪಡುತ್ತೇವೆ. ಅನೇಕರು ಸಂತೋಷದಲ್ಲಿರುವಾಗ, ನೋವಿನಲ್ಲಿರುವಾಗ ಸಂಗೀತಕೇಳ್ತಾರೆ. ಮೈಂಡ್ ಹಾಗೂ ಮೂಡ್ ಫ್ರೆಶ್ ಆಗೋಕೆ ಸಂಗೀತ ಸಹಕಾರಿ. ಕೆಲಸ ಮಾಡಿ ಮಾಡಿ ಬೇಸರವಾದಾಗ ನಮ್ಮಿಷ್ಟದ ಒಂದು ಹಾಡು ಕೇಳಿದರೂ ಸಾಕು..ಮತ್ತೆ ಕೆಲಸ ಮಾಡೋಕೆ ಉತ್ಸಾಹ ಮರುಕಳಿಸುತ್ತೆ. ದಣಿದ ಮನಸ್ಸಿಗೆ ಉಲ್ಲಾಸ ತುಂಬುತ್ತೆ ಮ್ಯೂಸಿಕ್.

ಅಂದಹಾಗೆ ವ್ಯಕ್ತಿಗಳ ಅಭಿರುಚಿ ಬೇರೆ ಬೇರೆ. ಭಾವಗೀತೆ, ಭಕ್ತಿಗೀತೆ, ಜಾನಪದ, ಶಾಸ್ತ್ರೀಯ, ವೆಸ್ಟರ್ನ್, ಚಿತ್ರಗೀತೆ, ಅದರಲ್ಲೂ ವಿಭಿನ್ನ ಅಭಿರುಚಿ. ಇಂದಿನ ಯುವಪೀಳಿಗೆಗಂತೂ ಡಿಸ್ಕೋಹಾಡುಗಳು, ಪ್ಯಾಥೋಸಾಂಗ್ಗಳು, ಪ್ರೀತಿ, ಪ್ರೇಮದ ಹಾಡುಗಳು, ಟಪ್ಪಾಂಗುಚ್ಚಿ ಹಾಡುಗಳು ಇವುಗಳೇ ಇಷ್ಟ. ಇನ್ನೂ ಹಲವರಿಗೆ ಅವರವರ ಮೂಡ್ಗೆ ತಕ್ಕ ಹಾಗೆ ಮ್ಯೂಸಿಕ್ಕೇಳಬೇಕು ಎಂದೆನ್ನಿಸುತ್ತೆ. ಆದ್ರೆ ನಿಮ್ಮ ಸ್ನೇಹಿತರ ಜೊತೆ ನೀವು ಯಾವಾಗಲೂ ಸ್ಯಾಡ್ ಮ್ಯೂಸಿಕ್ ಕೇಳ್ತೀರಾ..?ಹೌದು ಅಂತಾದ್ರೆ ನಿಮ್ಮ ಈ ಅಭ್ಯಾಸವನ್ನು ಬಿಡಲೇಬೇಕು.

ಹೌದು..ವೆಸ್ಟರ್ನ ಸಿಡ್ನಿ ಯುನಿವರ್ಸಿಟಿಯಲ್ಲಿ ನಡೆದ ಸಂಶೋಧನೆಯ ಪ್ರಕಾರ, ಗುಂಪಿನಲ್ಲಿ ಸ್ಯಾಡ್ ಮ್ಯೂಸಿಕ್ ಅಥವಾ ಪ್ಯಾಥೋ ಸಾಂಗ್ಗಳನ್ನು ಕೇಳಿದರೆ ನೀವು ಡಿಪ್ರೆಷನ್ಗೆ ಹೋಗೋ ಸಾಧ್ಯತೆ ಇದೆಯಂತೆ. ಹೌದು.. ಸ್ಯಾಡ್ ಮ್ಯೂಸಿಕ್ ಕೇಳೋದು ಹಾಗೂ ಬೇಸರದ ಸಂಗತಿಗಳ ಬಗ್ಗೆ ಪದೇ ಪದೇ ಮಾತನಾಡೋದರಿಂದ ನೀವು ಖಿನ್ನತೆಗೆ ಒಳಗಾಗೋ ಸಾಧ್ಯತೆ ಇದೆಯಂತೆ. ಅದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದರ ಜೊತೆಗೆ ಸಾಮಾಜಿಕ ಸಂಬಂಧಗಳ ಮೇಲೆಯೂ ಇದು ಪರಿಣಾಮ ಬೀರುತ್ತದೆ ಎನ್ನುತ್ತೆ ಸಂಶೋಧನೆ.

ಗುಂಪಿನಲ್ಲಿ ಸ್ಯಾಡ್ ಮ್ಯೂಸಿಕ್ ಕೇಳೋದ್ರಿಂದ ನಕಾರಾತ್ಮಕ ಮಾತುಗಳು ಹೆಚ್ಚಾಗುತ್ತವೆ. ಇದರಿಂದ ಮನಸ್ಸು ಹೆಚ್ಚು ಹೆಚ್ಚಾಗಿ ನೆಗೆಟಿವ್ ಭಾವನೆಗಳಿಂದ ತುಂಬಿ ಹೋಗುತ್ತವೆ. ಇದು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋದು ತಜ್ಞರ ಅಭಿಪ್ರಾಯ.ಅದೇ ಗುಣಾತ್ಮಕ, ಒಳ್ಳೆಯ ಸಂತೋಷದಾಯಕ ಹಾಡುಗಳನ್ನು ಕೇಳೋದ್ರಿಂದ ಮನಸ್ಸೂ ಖುಷಿಯಾಗಿರುತ್ತದೆ.

ಹೀಗಾಗಿ ನೋವು ತುಂಬಿದ ಹಾಡುಗಳನ್ನು, ಅದರ ಸಾಹಿತ್ಯವನ್ನು ಪದೇ ಪದೇ ಗುನುಗುತ್ತಿರೋದ್ರಿಂದ ನಿಮ್ಮ ಮಾನಸಿಕ ಆರೋಗ್ಯ ಹಾಳಾಗುತ್ತೆ ಎಂದಾದಲ್ಲಿ… ಒಳ್ಳೆಯ..ಖುಷಿ ಖುಷಿಯಾಗಿರೋ ಹಾಡುಗಳನ್ನು ಕೇಳೋದ್ರಲ್ಲಿ ತಪ್ಪೇನು ಹೇಳಿ….ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ