ನಗರಕ್ಕೆ ಎಲೆಕ್ಟ್ರಿಕ್ ಬಸ್ಸು: 'ಶೀಘ್ರದಲ್ಲೇ ಜರ್ಮನ್ ಜೊತೆಗೆ ಒಪ್ಪಂದ'

Soon agreement for electric buses: said dcm parameshwar

27-08-2018

ಬೆಂಗಳೂರು: ನಗರದಲ್ಲಿ ಎಲೆಕ್ಟ್ರಿಕ್ ಬಸ್‍ಗಳನ್ನು ರಸ್ತೆಗಿಳಿಸಿದರೆ ಸೂಕ್ತ ತಂತ್ರಜ್ಞಾನ ಒದಗಿಸಲು ನೀಡಲು ಜರ್ಮನ್ ದೇಶ ಸಮ್ಮತಿಸಿದೆ. ಈ ಸಂಬಂಧ ಶೀಘ್ರವೇ ಒಪ್ಪಂದ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದರು.

ಜರ್ಮನ್ ಪ್ರತಿನಿಧಿಗಳಾದ ಮುನ್ಸಿಪಾಲ್ ಫಿನಾನ್ಸ್ ಎಕ್ಸ್ ಪರ್ಟ್ ಜರ್ಗನ್ ಬೌವ್ಮಾನ್ನ್, ಸಿ40 ಸಿಟಿ ಮುಖ್ಯಸ್ಥ ಜೇಮ್ಸ್ ಅಲೆಗ್ಸಾಂಡರ್ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ, ಚರ್ಚೆ ನಡೆಸಿದ ನಂತರ ಈ ವಿಷಯ ತಿಳಿಸಿದರು. 

ನಗರದಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಡೀಸೆಲ್ ಬಸ್‍ಗಳ ಬದಲು ಎಲೆಕ್ಟ್ರಿಕ್ ಬಸ್‍ಗಳನ್ನು ರಸ್ತೆಗಿಳಿಸಿದರೆ ಬಹುತೇಕ ವಾಯುಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ. ಎಲೆಕ್ಟ್ರಿಕ್ ಬಸ್‍ಗಳ ದರ ಹೆಚ್ಚಿರಬಹುದು. ಆದರೆ, 1 ಮಿಲಿಯನ್ ಟೆಕ್ನಿಕಲ್ ಅಸಿಸ್ಟೆನ್ಸ್ ನೀಡಲು ಸಿದ್ಧವಿರುವುದಾಗಿ ಜರ್ಮನ್ ಪ್ರತಿನಿಧಿಗಳು ತಿಳಿಸಿದರು. ಇದಕ್ಕೆ ಒಪ್ಪಿದ ಪರಮೇಶ್ವರ್ ಅವರು, ಈ ಬಗ್ಗೆ ಸಾರಿಗೆ ಸಚಿವರೊಂದಿಗೆ ಚರ್ಚಿಸಿ, ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ