ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಸಿಎಂ: ಜಿಟಿಡಿ

CM kumaraswamy has fulfilled farmers wish as he said: GT Devegowda

27-08-2018

ಮೈಸೂರು: ಮೈಸೂರು ಮಹಾ‌ನಗರ ಪಾಲಿಕೆ ಚುನಾವಣೆ ಹಿನ್ನೆಲೆ, ಮೈಸೂರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜಿಟಿಡಿ ‘ಸಮ್ಮಿಶ್ರ ಸರ್ಕಾರವಿದ್ದರೂ ಸಿಎಂ‌ ಕುಮಾರಸ್ವಾಮಿ ರೈತರ ಸಾಲಮನ್ನಾ ಘೋಷಣೆ ಮಾಡಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಬ್ಯಾಂಕ್ ಗಳ ಸಾಲಕ್ಕೆ ಬಡ್ಡಿ ಸಮೇತ ಪಾವತಿಸಲು ಸಮ್ಮಿತಿಸಿರುವುದು ದೇಶದಲ್ಲೇ ಮೊದಲು ಎಂದರು.

ದೇವರಾಜ ಮಾರುಕಟ್ಟೆ ಸೇರಿದಂತೆ, ಮೈಸೂರಿನ ವಿವಿಧ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಯ ಅಗತ್ಯವಿದೆ. ನಗರ ಪಾಲಿಕೆ ಚುನಾವಣೆ ಮುಗಿಯುತ್ತಿದ್ದಂತೆ ಬಹಳಷ್ಟು ಕಾಮಗಾರಿಗಳು ಚುರುಕುಗೊಳ್ಳಲಿದೆ. ಕೊಡಗಿನ ಪ್ರವಾಹಕ್ಕೆ ಸ್ಪಂದನೆ ಜೊತೆಗೆ ದಸರಾ ಹಾಗೂ ಚುನಾವಣೆ ಬಂದಿದೆ. ಹಲವು ಸವಾಲುಗಳು ಸರ್ಕಾರಕ್ಕೆ ಎದುರಾಗಿದೆ. ಸಮಸ್ಯೆಗಳೆಲ್ಲವನ್ನೂ ಸವಾಲಾಗಿ ಸ್ವೀಕರಿಸಿ ಸಿಎಂ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಸ್ವತಂತ್ರವಾಗಿಯೇ ಸ್ಪರ್ಧೆ ಮಾಡಲಿದೆ. ಚುನಾವಣೆಗೆ ಖುದ್ದು ನಾವು ಪ್ರಚಾರ ಮಾಡಲೂ ಕಾಲಾವಕಾಶವೇ ಇಲ್ಲದಂತಾಗಿದೆ ಎಂದರು.

ಮೈಸೂರಿನ ಸಮಸ್ಯೆಗಳ ಬಗ್ಗೆ ನಮಗೆ ಅರವಿದೆ. ಖಂಡಿತವಾಗಿ ನಗರಪಾಲಿಕೆ ಆಡಳಿತ ಜೆಡಿಎಸ್ ಕೈಗೆ ಸಿಕ್ಕರೆ ನಗರದ ಸಮಗ್ರ ಅಭಿವೃದ್ಧಿ ಮಾಡುತ್ತೇವೆ ಎಂದು ಸಚಿವ ಜಿ.ಟಿ.ದೇವೇಗೌಡರು ಭರವಸೆ ನೀಡಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

GT Devegowda Farmers ಭರವಸೆ ಸಮಸ್ಯೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ