ಸಿದ್ದರಾಮಯ್ಯ ನನ್ನ ಓಲ್ಡ್ ಫ್ರೆಂಡ್: ಹೆಚ್.ವಿಶ್ವನಾಥ್

siddaramaiah is my old friend

27-08-2018

ಬೆಂಗಳೂರು: 'ಸಮನ್ವಯ ಸಮಿತಿ ಸದಸ್ಯರ ನಿರ್ಧಾರ ಯಾರೋ ಒಬ್ಬರು ಮಾಡಲು ಸಾಧ್ಯ ಇಲ್ಲ, ಸಮನ್ವಯ ಸಮಿತಿನೇ ಬೇರೆ, ಸರ್ಕಾರದ ಕಾರ್ಯ ವೈಖರಿನೇ ಬೇರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಟಾಂಗ್ ನೀಡಿದ್ದಾರೆ. ‘ಕಾಮನ್ ಮಿನಿಮಂ ಪ್ರೋಗ್ರಾಂ’ ನಿಯಮದಡಿ ಸರ್ಕಾರ ಆಡಳಿ ನಡೆಸುತ್ತಿದೆ. ಸಮನ್ವಯ ಸಮಿತಿಯಲ್ಲಿ ಎರಡು ಪಕ್ಷಗಳ ರಾಜ್ಯಾಧ್ಯಕ್ಷರು ಇರಬೇಕು. ಸಿದ್ದರಾಮಯ್ಯ ನನ್ನ ಓಲ್ಡ್ ಫ್ರೆಂಡ್,  ನಾನು ಸಮನ್ವಯ ಸಮಿತಿ ಸದಸ್ಯ ಆಗಲು ಅವರು ಯಾಕೆ ತಡೆಯುತ್ತಾರೆ, ಸಾಲ ಮನ್ನಾ ಕ್ರೆಡಿಟ್ ಮದುವೆಯಾದ ಇಬ್ಬರಿಗೂ ಸೇರಬೇಕು' ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜೆಡಿಎಸ್ ಪಕ್ಷ ಪಾಲಿಕೆ ಚುನಾವಣೆಯಲ್ಲಿ ಅಧಿಕಾರ ಹಿಡಿದಿತ್ತು, ಎಂದು ನಿನ್ನೆ ಸಿದ್ದರಾಮಯ್ಯ ಹೇಳಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ವಿಶ್ವನಾಥ್, ಜೆಡಿಎಸ್ ನಲ್ಲಿ ನೀವು ಇದ್ದಾಗ ಉಪ ಮುಖ್ಯಮಂತ್ರಿ ಆಗಿದ್ದೀರಿ. ಆಗ ಉಪ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದು ಜೆಡಿಎಸ್ ಅದನ್ನು ಸಿದ್ದರಾಮಯ್ಯ ಅವರು ಮರೆಯೋದು ಬೇಡ ಎಂದು ತಿರುಗೇಟು ನೀಡಿದ್ದಾರೆ. ಭವಿಷ್ಯದಲ್ಲಿ ಜೆಡಿಎಸ್ ಪಕ್ಷ ಪ್ರಭಲ ರಾಜಕೀಯ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

H.Vishwanath Siddaramaiah ರಾಜಕೀಯ ನಿಯಮ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ