ಮುಂದಿನ ಮೇಯರ್- ಪಾಲಿಕೆ ಸದಸ್ಯರದ್ದೇ ತಿರ್ಮಾನ: ಡಿಸಿಎಂ

DCM parameshwar inaugurated manjunath nagar flyover

27-08-2018

ಬೆಂಗಳೂರು: ರಾಜಾಜಿನಗರದ ಮಂಜುನಾಥನಗರದಲ್ಲಿ ನಿರ್ಮಾಣವಾಗಿರುವ ಮೇಲು ಸೇತುವೆಯನ್ನು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಇಂದು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ  ಉಪಮುಖ್ಯಮಂತ್ರಿಗಳು ಮೇಲು ಸೇತುವೆ 18 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಟೆಂಡರ್ ಕರೆಯುವ ಸಂದರ್ಭದಲ್ಲಿ ಸಮಯ ನಿಗದಿ ಪಡಿಸಬೇಕು, ಕಾಲ ಮಿತಿಯಲ್ಲಿ ಕಾಮಗಾರಿ ಪೂರ್ಣ ಮಾಡುವಂತೆ ಗುತ್ತಿಗೆದಾರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ದಂಡ ವಿಧಿಸಬೇಕು. ಶೀಘ್ರ ಕಾಮಗಾರಿ ನಡೆದು ಸಾರ್ವಜನಿಕರಿಗೆ ಅನುಕೂಲವಾಗಬೇಕು ಎಂದರು.

ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಿರುವುದರಿಂದ ಪೌರ ಕಾರ್ಮಿಕರ ವೇತನ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಿಯಂತ್ರಣದಲ್ಲಿದೆ. ಬೆಂಗಳೂರು ಮಹಾನಗರ ಪಾಲಿಕೆ ಉತ್ತಮ ಪಾಲಿಕೆ ಎಂದು ಹೆಸರುಗಳಿಸಿದೆ. ಬೆಂಗಳೂರು ಮುಂದಿನ ಮಹಾ ಪೌರರ ಆಯ್ಕೆಯನ್ನು ಪಾಲಿಕೆ ಸದಸ್ಯರೇ ತಿರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.

ಸಮಾರಂಭದಲ್ಲಿ, ಮಹಾಪೌರ ಸಂಪತ್ ರಾಜ್, ಶಾಸಕ ಸುರೇಶ್ ಕುಮಾರ್, ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ರಾಜ್ಯಸಭಾ ಸದಸ್ಯರಾದ ಹನಮಂತಯ್ಯ, ಅಯುಕ್ತರಾದ ಮಂಜುನಾಥ ಪ್ರಸಾದ್ ಮಾಜಿ ಮಹಾಪೌರರಾದ ಶ್ರೀಮತಿ ಜಿ.ಪದ್ಮಾವತಿ ಪಾಲ್ಗೊಂಡಿದ್ದರು.


ಸಂಬಂಧಿತ ಟ್ಯಾಗ್ಗಳು

G.Parameshwara BBMP ಮಹಾ ಪೌರ ರಾಜ್ಯಸಭಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ