ಕೇಂದ್ರ ಸರ್ಕಾರಕ್ಕೆ ಎಐಸಿಸಿ ವಕ್ತಾರ ಜೈವೀರ್ ಸವಾಲ್!

AICC spokesperson Jaiveer challenge to Center government!

27-08-2018

ಮಂಗಳೂರು: ‘ಬಿಜೆಪಿ ಸರ್ಕಾರ ಹೊಟ್ಟೆಯಲ್ಲಿ ಭ್ರಷ್ಟಾಚಾರ ತುಂಬಿಕೊಂಡು ನಿದ್ದೆಗೆ ಜಾರಿದೆ. ಪ್ರಧಾನಿ ಮೋದಿ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಿಸುವ ಭರವಸೆ ಕೊಟ್ಟಿದ್ದರು. ಆದರೆ, ಈಗ ಬಿಜೆಪಿಯೇ ದೇಶದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದೆ’ ಎಂದು ಎಐಸಿಸಿ ವಕ್ತಾರ ಜೈವೀರ್ ಶೆರ್ಗಿಲ್ ಹೇಳಿದ್ದಾರೆ.

ಮಂಗಳೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶೆರ್ಗಿಲ್, ಕೇಂದ್ರ ಸರ್ಕಾರದ ಬಗ್ಗೆ ಟೀಕೆ ಮಾಡಿದ್ದಾರೆ. ‘ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಮೋದಿ ಸರ್ಕಾರ ಭಾರೀ ಭ್ರಷ್ಟಾಚಾರ ನಡೆಸಿದೆ. ಈ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಮಾಡಿದರೆ ನಾವು ದೇಶ ದ್ರೋಹಿಗಳಾಗ್ತೀವಿ’ ರಫೇಲ್ ಹಗರಣದ ಮೂಲಕ ದೇಶಕ್ಕೆ ಅಪಾರ ಹಣ ನಷ್ಟವಾಗಿದೆ. 526 ಕೋಟಿಯ ವಿಮಾನವನ್ನ 1670 ಕೋಟಿಗೆ ಖರೀದಿಸಲಾಗಿದೆ’ ಎಂದು ಆರೋಪಿಸಿದ್ದಾರೆ.

ರಕ್ಷಣಾ ಸಚಿವೆ ನಿರ್ಮಾಲಾ ಸೀತಾರಾಮನ್ ‘ರಫೇಲ್ ಹಗರಣದ ವಿಚಾರದಲ್ಲಿ ಮೌನವಾಗಿದ್ದಾರೆ. ಈ ವಿಚಾರದಲ್ಲಿ ‘ಮ್ಯೂಸಿಕಲ್ ಚೇರ್’ ಆಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಯುದ್ಧ ವಿಮಾನ ತಯಾರಿ ವಿಚಾರದಲ್ಲಿ ಮೋದಿ ಕರ್ನಾಟಕಕ್ಕೂ ವಂಚಿಸಿದ್ದಾರೆ. ರಾಜ್ಯದ ಹೆಚ್.ಎ.ಎಲ್ ಕಂಪೆನಿಯ ತಯಾರಿಕಾ ಗುತ್ತಿಗೆಯನ್ನು ಕಿತ್ತುಕೊಂಡು ಖಾಸಗಿ ಕಂಪೆನಿ ರಿಲಾಯನ್ಸ್ ಗೆ ನೀಡಲಾಯಿತು. ವಿಮಾನ ತಯಾರಿ ಅನುಭವವೇ ಇಲ್ಲದ ರಿಲಾಯನ್ಸ್ ಗೆ ಕೊಟ್ಟು ಸಾರ್ವಜನಿಕ ವಲಯದ ಹೆಚ್.ಎ.ಎಲ್ ಕಂಪೆನಿಯನ್ನು ಕಡೆಗಣಿಸಲಾಗಿದೆ’ ಎಂದು ದೂರಿದ್ದಾರೆ.

‘ಈ ಮೂಲಕ ಮೋದಿ ಬಂಡವಾಳ ಶಾಹಿ ರಿಲಯನ್ಸ್ ಸ್ನೇಹಿತರಿಗೆ ಉತ್ತೇಜನ ನೀಡಿದ್ದಾರೆ. ಆದರೆ, ರಕ್ಷಣಾ ಮಂತ್ರಿ ಮಾತ್ರ ಗುತ್ತಿಗೆಯನ್ನೇ ಕೊಟ್ಟಿಲ್ಲ ಅಂತ ಸುಳ್ಳು ಹೇಳಿದ್ದಾರೆ. ಒಂದು ದೇಶ, ಒಂದು ಚುನಾವಣೆ ಎನ್ನುವುದು ಇನ್ನೊಂದು ‘ಪೊಲಿಟಿಕಲ್ ಲಾಲಿ ಪಾಪ್’, ಬಿಜೆಪಿ ದೇಶದ ಎಲ್ಲಾ ಕಡೆ ತನ್ನ ಸರ್ಕಾರವನ್ನು ವಿಸರ್ಜಿಸಲಿ, ಆಗ ಕಾಂಗ್ರೆಸ್ ಒಂದು ದೇಶ, ಒಂದು ಚುನಾವಣೆಯಡಿ ಚುನಾವಣೆ ಎದುರಿಸಲು ಸಿದ್ಧ ಎಂದು ಸವಾಲು ಹಾಕಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rafale jaiveer shergill ಪೊಲಿಟಿಕಲ್ ಚುನಾವಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ