ಪ್ರಚಾರಕ್ಕೆ ತೆರಳಿದ್ದ ಶಾಸಕ ಪರಣ್ಣಗೆ ಸ್ಥಳೀಯರಿಂದ ತರಾಟೆ!

Paranna munavalli

27-08-2018

ಕೊಪ್ಪಳ: ಚುನಾವಣೆ ಪ್ರಚಾರಗಳಲ್ಲಿ, ಮತಯಾಚನೆ ವೇಳೆಯಷ್ಟೇ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿ ಓಡಾಡುತ್ತಾರೆ. ನಂತರ, ಇತ್ತ ತಿರುಗಿಯೂ ನೋಡುವುದಿಲ್ಲ ಎಂಬ ಮಾತುಗಳು ಹೊಸದೇನಲ್ಲ. ಅದರೆ, ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ ಕೊಪ್ಪಳದಲ್ಲಿ ಪ್ರಚಾರಕ್ಕೆ ಬಂದಿದ್ದ ಶಾಸಕನನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊಪ್ಪಳದ ಗಂಗಾವತಿಯಲ್ಲಿ, ಶಾಸಕ ಪರಣ್ಣ ಮುನವಳ್ಳಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಪ್ರಚಾರಕ್ಕಾಗಿ, ತಾಲ್ಲೂಕಿನ 7ನೇ ವಾರ್ಡಗೆ ಬಂದಿದ್ದರು. ಈ ವೇಳೆ ಕೆಂಡಾಮಂಡಲರಾದ ಸ್ಥಳೀಯರು,  ‘ಶಾಸಕನಾಗಿ ಆಯ್ಕೆಯಾದ ಮೇಲೆ ಇದುವರೆಗೂ ನಗರ ಸಂಚಾರ ಮಾಡಿಲ್ಲ. ಸಮಸ್ಯೆಗಳಿಗೆ ಸ್ಪಂದಿಸಿಲ್ಲ’ ಈಗ ಚುನಾವಣೆ ಹಿನ್ನೆಲೆ ಮತಯಾಚನೆಗೆ ಬಂದಿದ್ದೀರಾ’ ಎಂದು ಜನರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಶಾಸಕನ ಬೆಂಬಲಿಗರೊಂದಿಗೆ ಸ್ಥಳೀಯರ ಜಟಾಪಟಿಯೂ ನಡೆದಿದೆ. ಪರಿಸ್ಥಿತಿ ವಿಕೋಕಪಕ್ಕೆ ತಿರುಗುತ್ತಿದ್ದಂತೆ, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Paranna munavalli gangavathi ಪ್ರಚಾರ ಸ್ಥಳೀಯ ಸಂಸ್ಥೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ