ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದು ಪಕ್ಷ ನಿರ್ಧಾರ ಮಾಡುತ್ತದೆ !

Kannada News

01-06-2017

ಬಳ್ಳಾರಿ:- ನಾನು ವಿಧಾನಸಭೆ ಚುನಾವಣೆ ಗೆ ನಿಲ್ಲಬೇಕೆ ಅಥಾವಾ ಬೇಡವೇ ಎನ್ನುವುದನ್ನು ಪಕ್ಷ ನಿರ್ಧಾರ ಮಾಡುತ್ತದೆ ಎಂದು ಸಂಸದ ಶ್ರೀರಾಮುಲು ಹೇಳಿದ್ದಾರೆ. ಬಹುತೇಕ ಸಂಸದರು ಚುನಾವಣೆಗೆ ನಿಲ್ಲಲು ಉತ್ಸುಕರಾಗಿದ್ಧಾರೆ. ಅದರೆ ಇದಕ್ಕೆ ಹೈ ಕಮಾಂಡ್ ನಿರ್ಧಾರ ಅಂತಿಮ, ಜನಾರ್ಧನರೆಡ್ಡಿ ಚುನಾವಣಾ ಗೆ ನಿಲ್ಲುವ ವಿಚಾರ ಅವರಿಗೆ ಬಿಟ್ಟಿದ್ದು, ಅವರಿಗೆ ಒಳ್ಳೆಯದು ಅಗಬೇಕೆನ್ನುವುದೆ ನನ್ನ ಹಂಬಲ. ನಾನು ಎಂಪಿ ಯಿಂದ ಎಂಎಲ್ ಎ ಗೆ  ನಿಲ್ಲಬೇಕಾದರೆ ಮೋದಿ ಮತ್ತು ಅಮಿತ್ ಷಾ ಅನುಮತಿ ನೀಡಬೇಕು ಎಂದರು. ಮೋದಿ ಫೆಸ್ಟ್ ವಾಹನಕ್ಕೆ ಚಾಲನೆ ನೀಡಿದ ಬಳಿಕ ಶ್ರೀರಾಮುಲು ಬಳ್ಳಾರಿಯಲ್ಲಿ ಈ ಮಾತನ್ನು ಹೇಳಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ