ಶ್ರೀರಂಗಪಟ್ಟಣ ಸುತ್ತಮುತ್ತ ಮರಳು ಮಾಫಿಯಾ?

sand mafia in around srirangapatna ?

27-08-2018

ಮಂಡ್ಯ: ಕೆ.ಆರ್.ಎಸ್ ಜಲಾಶಯದ ಕಾವೇರಿ ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಇಳಿಮುಖವಾದ ಬೆನ್ನಲ್ಲೇ,  ಕಾವೇರಿ ನದಿ ಪಾತ್ರದಲ್ಲಿ ದಂಧೆಕೋರರು ಅಕ್ರಮ ಮರಳು ದಂಧೆ ಶುರುಮಾಡಿಕೊಂಡಿದ್ದಾರೆ. ಅಪ್ರಾಪ್ತ ಯುವಕರನ್ನು ಬಳಸಿಕೊಂಡು ಶ್ರೀರಂಗಪಟ್ಟಣದ ಸುತ್ತಲಿನ ಕಾವೇರಿ ನದಿಯಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಸುತ್ತಿದ್ದಾರೆ. ಎತ್ತಿನಗಾಡಿಗಳ ಮೂಲಕ ತುಂಬಿದ ನದಿಯಲ್ಲಿ ಮರಳನ್ನು ತೆಗೆಯುತ್ತಿರುವುದು ಕಂಡುಬಂದಿದೆ. ಮರಳು ಮಾಫಿಯಾದವರ ಪುಡಿಗಾಸಿನ ಆಸೆಗೆ‌ ನದಿಯಲ್ಲಿ‌ ಮುಳುಗಿ ಮರಳು ತೆಗೆಯುತ್ತಿದ್ದಾರೆ ಯುವಕರು. ಪಾಲಹಳ್ಳಿ, ಶ್ರೀರಂಗಪಟ್ಟಣ ಗಂಜಾಮ್, ಪಾಲಹಳ್ಳಿ ದೊಡ್ಡಪಾಳ್ಯ, ಮೇಳಾಪುರ ಸೇರಿದಂತೆ ಹಲವು ನದಿ ಪಾತ್ರದ ದಂಡೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದು ತಿಳಿದು ಬಂದಿದೆ. ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಕಂಡು ಕಾಣದಂತೆ ಕಣ್ಮುಚ್ಚಿ ಕುಳಿತಿದೆ ಪೊಲೀಸ್ ಇಲಾಖೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೂಡಲೆ ಈ ಕುರಿತು ಕ್ರಮ ವಹಿಸಬೇಕೆಂದು ಒತ್ತಾಯಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

srirangapattana sand mafia ಕೆ.ಆರ್.ಎಸ್ ಜಲಾಶಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ