ಕೊಡಗಿಗೆ 1 ಕೋಟಿ ನೆರವು: ‘ಪರಿಷತ್ ಸದಸ್ಯರ ಕ್ಷೇತ್ರಾಭಿವೃದ್ಧಿ ನಿಧಿಯಿಂದ'

1 crore to Kodagu: From the

24-08-2018

ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಕೈಗೊಳ್ಳಲಿರುವ ಪರಿಹಾರ ಕಾರ್ಯಾಚರಣೆಗೆ ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿಯಿಂದ 1 ಕೋಟಿ ರೂ.ಗಳ ನೆರವು ನೀಡುವುದಾಗಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಲೆಹರ್ ಸಿಂಗ್ ಹೇಳಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನಲ್ಲಿ ಸಂಭವಿಸೊರುವ ಮಳೆಹಾನಿಯಿಂದ ಅಪಾರ ಪ್ರಮಾಣದ ನಷ್ಟವುಂಟಾಗಿದೆ.ಅವರ ನೆರವಿಗೆ ಕೈಜೋಡಿಸಲು ನನ್ನ ಎಂಎಲ್ಸಿ ಫಂಡ್ ನಲ್ಲಿ 1 ಕೋಟಿ ರೂ.ಗಳನ್ನು ನೀಡುತ್ತಿದ್ದೇನೆ,ಅಲ್ಲಿಯ ಜಿಲ್ಲಾಡಳಿತದ ಮೂಲಕ ಪರಿಹಾರ ಕಾರ್ಯಗಳಿಗೆ ಅಗತ್ಯ ಹಣಕಾಸು ನೆರವನ್ನು ಶಾಸಕರ ನಿಧಿಯಿಂದ ನೀಡುತ್ತೇನೆ, ಇನ್ನೂ ಹೆಚ್ಚಿನ ಹಣದ ಅಗತ್ಯ ಬಿದ್ದರೆ ವೈಯಕ್ತಿಕವಾಗಿಯೂ ನೀಡುತ್ತೇವೆ, ಕೊಡಗನ್ನು ಕಟ್ಟಲು ಸಹಕಾರ ನೀಡಲು ಸಿದ್ದ ಎಂದರು.

ನಾನು 1 ಕೋಟಿ ರೂ.ಗಳನ್ನು ನೀಡಿದಂತೆ ಆ ಭಾಗದ ಜನ ಪ್ರತಿನಿಧಿಗಳು ಕೂಡ ತಮ್ಮ ಶಾಸಕರ, ಸಂಸದರ ನಿಧಿಯಿಂದ ಹಣಕಾಸು ನೆರವು ನೀಡಬೇಕು ಎಂದು ಲೆಹರ್ ಸಿಂಗ್ ಮನವಿ ಮಾಡಿದರು.

ಕೊಡಗಿನಲ್ಲಿ ಸಂಭವಿಸಿದ ಹಾನಿ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ, ಗಡಿಯಲ್ಲಿ ದೇಶವನ್ನು ಕಾಯುವ ಸೈನಿಕರನ್ನು ನೀಡಿದ ಜಿಲ್ಲೆ ಕೊಡಗು,ಅಂತಹ ಜಿಲ್ಲೆಯಲ್ಲಿ ನೆರೆಯಿಂದ ಸಾವಿರಾರು ಜನ ಸಂತ್ರಸ್ತರಾಗಿದ್ದಾರೆ.ಅವರಿಗೆ ನೆರವು ನೀಡುವುದು ಅಗತ್ಯ, ಪುನರ್ವಸತಿ ಕಲ್ಪಿಸುವ ನೆರವಿಗೆ ಸಿದ್ದವಿರುವುದಾಗಿ ಸಿಎಂಗೆ ಹೇಳಿದ್ದೇನೆ, ನನ್ನ ಭಾವನೆಯನ್ನು ವ್ಯಕ್ತಪಡಿಸಿದ್ದೇನೆ, ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ