ಕೊಡಗಿಗೆ ಮಾನಸಿಕ ತಜ್ಞರ ತಂಡ

dgp neelamani raju press meet at kodagu

24-08-2018

ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ 4 ಮಂದಿ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿರುವ ಶಂಕೆಯಿದೆ. ಈವರೆಗೆ 11 ಮಂದಿ ನಾಪತ್ತೆಯಾಗಿದ್ದು ಪತ್ತೆಗಾಗಿ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ತಿಳಿಸಿದ್ದಾರೆ. ಮಡಿಕೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಅವರು, ಮಳೆ ಮತ್ತೆ ರಭಸಗೊಂಡರೆ ಭೂಕುಸಿತದ ಭೀತಿ ಹಿನ್ನಲೆಯಲ್ಲಿ ಹಾನಿಗೊಳಗಾಗಿರುವ ಗ್ರಾಮಗಳಿಗೆ ಜನರನ್ನು ಬಿಡಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ನಿರಾಶ್ರಿತರಾದವರಿಗೆ ಮಾನಸಿಕ ಸ್ಥೆರ್ಯ ತುಂಬುವ ಕಾರ್ಯಕ್ಕೆ ಮಾನಸಿಕ ತಜ್ಞರ ತಂಡ ಕೊಡಗಿಗೆ ಬಂದಿದ್ದು, ವಿವಿಧ ನಿರಾಶ್ರಿತ ಶಿಬಿರಗಳಲ್ಲಿ ಈ ತಜ್ಞರು ಸಮಾಲೋಚನೆ ನಡೆಸಲಿದ್ದಾರೆಂದು ಅವರು ಹೇಳಿದರು.


ಸಂಬಂಧಿತ ಟ್ಯಾಗ್ಗಳು

flood kodagu ಪ್ರವಾಹ ತಜ್ಞರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ