ಸೋತಂತಿದೆ ಗೂಢಾಚಾರಿ ‘ಜೀನಿಯಸ್’..!

genius  movie review

24-08-2018

ಬಾಲಿವುಡ್ ನ ನಿರ್ದೇಶಕ ಹಾಗು ನಿರ್ಮಾಪಕ ಅನಿಲ್ ಶರ್ಮಾ ನಿರ್ದೇಶನದಲ್ಲಿ ಮೂಡಿಬಂದಿರುವ ‘ಜೀನಿಯಸ್’ ಹಿಂದಿ ಚಿತ್ರ ಈ ವಾರ ತೆರೆಕಂಡಿದ್ದು. ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿರ್ದೇಶಕ ಅನಿಲ್ ಶರ್ಮಾರ ಮಗನೇ ಈ ಸಿನೆಮಾದಲ್ಲಿ ನಾಯಕ ನಟನಾಗಿರುವುದು ವಿಶೇಷ. ಈ ಹಿಂದೆ ಅನಿಲ್ ಶರ್ಮಾ ಗದಾರ್, ಅಪ್ನೆ, ವೀರ್, ಸಿಂಗ್ ಸಾಹೇಬ್ ದಿ ಗ್ರೇಟ್ ಸಿನೆಮಾಗಳನ್ನು ನಿರ್ದೇಶಿಸಿದ್ದರು, ಆದ್ದರಿಂದ ಸಹಜವಾಗಿಯೇ ಜೀನಿಯಸ್ ಸಿನೆಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿಯೇ ಇತ್ತು. ಸೋಹಂ ಎಂಟರ್ಟೈನ್ಮೆಂಟ್ ಸಂಸ್ಥೆ ಸೇರಿದಂತೆ ಕೆಸಿ ಶರ್ಮಾ, ದೀಪಕ್ ಮುಕ್ತ್, ಕಮಲ್ ಮುಕ್ತ್, ಅನಿಲ್ ಶರ್ಮಾ ಸಿನೆಮಾಗೆ ಹಣ ಹೂಡಿದ್ದಾರೆ.

ಜೀನಿಯಸ್ ಸಿನೆಮಾದ ಪ್ರಶಂಸನೀಯ ಅಂಶಗಳು:

  1. ಅದ್ಭುತ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿರುವುದು ನೋಡುಗರನ್ನು ಖುಷಿಪಡಿಸಿದೆ.
  2. ನಟ ಉತ್ಕರ್ಷ್ ಶರ್ಮಾ ತಮ್ಮ ಮುಗ್ಧ ಮುಖದೊಂದಿಗೆ ನಟನೆ ಮತ್ತು ನೃತ್ಯದಲ್ಲಿ ಸಾಮರ್ಥ್ಯ ಪ್ರದರ್ಶಿಸಿರುವುದು.

ಸಿನೆಮಾದ ವೀಕ್ ಅಂಶಗಳು:

  1. ನಿರ್ದೇಶನ ವಿಚಾರದಲ್ಲಿ ಆನಿಲ್ ಶರ್ಮಾ ನಿರಾಸೆ ಮೂಡಿಸಿದ್ದಾರೆ ಎನ್ನಲಾಗಿದೆ.
  2. ನಾಯಕ ನಟರಾಗಿ ಚೊಚ್ಚಲ ಪ್ರಯತ್ನದಲ್ಲಿ ಉತ್ಕರ್ಷ್ ಶರ್ಮಾರ ನಟನೆ ಸಾಧಾರಣ ಎನ್ನುವಂತಿದೆ.
  3. ಸಿನೆಮಾ ಮೂರು ವಿಚಾರಗಳಲ್ಲಿ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿದೆ ಎಂದು ವಿಮರ್ಶಿಸಲಾಗುತ್ತಿದೆ.1. ಸಿನೆಮಾ ನಿರ್ಮಾಣ, 2. ಕಥೆ-ಚಿತ್ರಕಥೆ 3. ಸಂಭಾಷಣೆ ತೀರಾ ಸಪ್ಪೆ ಎನ್ನುವಂತಿದೆ. 
  4. ಸಿನೆಮಾದಲ್ಲಿ ಮನರಂಜನೆ ಅಂಶಗಳು ಕಡಿಮೆ. ಈ ಜೀನಿಯಸ್ ಸಿನೆಮಾ ಗೂಢಾಚಾರಿ ಆಧಾರಿತ ಚಿತ್ರವಾದರೂ, ಅಷ್ಟಾಗಿ ರೋಮಾಂಚನಕಾರಿಯಾಗಿಲ್ಲ.
  5. ಇನ್ನು ಹಾಡುಗಳಲ್ಲಿ  ಹಿಮೇಷ್‌ ರೇಷಮಿಯಾ ಹಾಡಿರುವ ಒಂದು ಹಾಡು ಬಿಟ್ಟರೆ ಮಿಕ್ಕೆಲ್ಲ ಹಾಡುಗಳನ್ನು ಸಿನೆಮಾದಲ್ಲಿ ತುಕುಕಿದಂತೆ ಭಾಸವಾಗುತ್ತದೆ.
  6. ಸಿನೆಮಾದ ನಾಯಕ ನಟಿ ಇಶಿತಾ ಚೌಹಾನ್ ನೋಡಲು ಸುಂದರವಾಗಿದ್ದು, ಕೊನೆಯವರೆಗೂ ಒಂದೇ ರೀತಿಯ ಅಭಿನಯ ಇವದ್ದಾಗಿರುತ್ತದೆ. ಎಂದಿನ ಧಾಟಿಯಲ್ಲೇ ನವಾಜುದ್ದೀನ್ ಸಿದ್ದಿಕಿ ತಮ್ಮ ಅಭಿನಯ ತೋರಿದ್ದಾರೆ.
  7. ಇನ್ನು ಎಡಿಟಿಂಗ್ ವಿಚಾರಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಒಟ್ಟಾರೆ ಜೀನಿಯಸ್ ಸಿನೆಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಸೋತಿದೆ ಎಂದು ಹಲವು ವಿಮರ್ಶಕರು ಹೇಳುತ್ತಿದ್ದಾರೆ.

ವಿಮರ್ಶೆ: ಅನೀಸ್ ಮೋರಾಬ್


ಸಂಬಂಧಿತ ಟ್ಯಾಗ್ಗಳು

genius Review ಉತ್ಕರ್ಷ್ ಶರ್ಮಾ ಸಾಮರ್ಥ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ