ಮನೆಮನೆಗೆ ಕುಮಾರಣ್ಣ !

Kannada News

01-06-2017

ಬೆಂಗಳೂರು:- ೨೦೧೮ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಈಗಿನಿಂದಲೇ ತಯಾರಿ ನಡೆಸುತ್ತಿದೆ. ಮನೆಮನೆಗೆ ಕುಮಾರಣ್ಣ ಎಂಬ ಸಂದೇಶ ಸಾರುವ ಪಾದಯಾತ್ರೆ ಹಮ್ಮಿಕೊಂಡಿದೆ. ಬೆಂಗಳೂರಿನ ಅಣ್ಣಮ್ಮ ದೇವತೆಗೆ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು. ಬೆಂಗಳೂರಿನ ೨೭ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಸಲಿದ್ದಾರೆ. ಇಂದಿನಿಂದ ಒಟ್ಟು ೧೫ ದಿನಗಳ ಕಾಲ ನಡೆಯಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು, ಶಾಸಕರಾದ ಗೋಪಾಲಯ್ಯ, ಮೇಲ್ಮನೆ ಸದಸ್ಯ ಶರವಣ, ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಲಿದ್ದು, ಮನೆ ಮನೆಗೆ ಕುಮಾರಣ್ಣ ಹೆಸರಲ್ಲಿ ಪ್ರಚಾರ ಹಮ್ಮಿಕೊಂಡಿರುವ ಜೆಡಿಎಸ್  ಬೆಂಗಳೂರಿನ 27 ವಿಧಾನ ಸಭಾ ಕ್ಷೇತ್ರದಲ್ಲೂ  ಕುಮಾರಸ್ವಾಮಿ ಅವರ 20 ತಿಂಗಳ ಸಾಧನೆ ಯನ್ನು ತಿಳಿಸಲಿದ್ದಾರೆ ಎಂದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ