‘ಮಡಿಕೇರಿಗೂ ಪರಿಹಾರ ಧನ ಬಿಡುಗಡೆ ಮಾಡಬೇಕು’

Release of compensation money to Madikeri: demanding MP Mallikarjun Kharge

24-08-2018

ಕಲಬುರಗಿ: ವಿದೇಶದಿಂದ ಬಂದ ನೆರೆ ಪರಿಹಾರವನ್ನ ಕೇಂದ್ರ ಸರ್ಕಾರ ತಿರಸ್ಕರಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಲೋಕಸಭೆಯ ಕಾಂಗ್ರೆಸ್ ನ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ‘ಈ ಹಿಂದೆ ನೆರೆ ಪರಿಹಾರವನ್ನ ನಾವು ರಿಜೆಕ್ಟ್ ಮಾಡಿದ್ದೆವು, ಆಗ ಸರ್ಕಾರದ ನಿಲುವಾಗಿತ್ತು. ಆದರೆ, ಕೇರಳದ ಸಿಎಂ ಈ ಕುರಿತು ಈಗಾಗಲೇ ನಿಧಿಯನ್ನ ಒಳ್ಳೆಯ ಕೆಲಸಕ್ಕೆ ಸದ್ಬಳಕೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಹಿಗಿದ್ದರೂ ನಮಗೆ ವಿದೇಶಿ ಸಹಾಯ ಬೇಕಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೇಂದ್ರ ಸರ್ಕಾರಕ್ಕೆ 2 ಸಾವಿರ ಕೋಟಿಗೂ ಅಧಿಕ ಅನುದಾನಕ್ಕೆ ಮನವಿ ಮಾಡಲಾಗಿದೆ. ಇಷ್ಟು ಹಣ ಕೇಂದ್ರವೇ ನೀಡಿದರೆ, ಬೇರೆ ಕಡೆಯಿಂದ ಪಡೆಯುವ ಪ್ರಶ್ನೆಯೇ ಬರಲ್ಲ. ಕೇರಳದ ಹಾಗೇ ಮಡಿಕೇರಿಗೂ ಪರಿಹಾರ ಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Mallikarjun kharge kerala flood ಅನುದಾನ ಸರ್ಕಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ