ಪುಂಡ-ಪೋಕರಿಗಳನ್ನು ವಶಕ್ಕೆ ಪಡೆದ ನಿರ್ಭಯಾ ಪಡೆ

Nirbhaya squad Operation at gulbarga

24-08-2018

ಕಲಬುರಗಿ: ನಗರದ ರೈಲ್ವೆ ಸ್ಟೇಷನ್, ಬಸ್ ನಿಲ್ದಾಣ ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರೊಂದಿಗೆ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುತ್ತಿದ್ದ ಪುಂಡ ಪೋಕರಿಗಳ ವಿರುದ್ಧ ನಿರ್ಭಯಾ ಪಡೆ ಕಾರ್ಯಾಚರಣೆ ನಡೆಸಿ, 100ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪೆಡದು, 146 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುತ್ತಿದ್ದ ಪುಂಡ-ಪೋಕರಿಗಳಿಗೆ ಪೊಲೀಸರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ವಶಕ್ಕೆ ಪಡೆದವರಿಂದ 13,200 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಕೆಲವರಿಗೆ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದ್ದಾರೆ ಪೊಲೀಸರು. ಯುವತಿಯರನ್ನು, ಮಹಿಳೆಯರನ್ನು ಚುಡಾಯಿಸುವ, ಕಿರುಕುಳ ನೀಡುವುದನ್ನು ತಪ್ಪಿಸಲೆಂದೇ ನಿರ್ಭಯಾ ಪಡೆಯನ್ನು ಅಸ್ತಿತ್ವಕ್ಕೆ ಪಡೆಯಲಾಗಿದೆ.


ಸಂಬಂಧಿತ ಟ್ಯಾಗ್ಗಳು

Nirbhaya squad ಕಿರುಕುಳ ಕಾರ್ಯಾಚರಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ