ನದಿ ದಾಟುತ್ತಿದ್ದ ದಂಪತಿಗಳು ನಾಪತ್ತೆ !

Kannada News

01-06-2017

ಸುಳ್ಯ:- ನದಿ ದಾಟುತ್ತಿದ್ದಾಗ ದಂಪತಿಗಳು ನಾಪತ್ತೆಯಾದ ಘಟನೆ ಚಾರ್ವಾಕ ಗ್ರಾಮದ ಐರಳಕ ಎಂಬಲ್ಲಿ ನಡೆದಿದೆ, ನಿನ್ನೆ ಮಧ್ಯಾಹ್ನದಿಂದ ನಾಪತ್ತೆಯಾಗಿರುವ ದಂಪತಿಗಳು ಇನ್ನೂ ಪತ್ತೆಯಾಗಿಲ್ಲ , ಸ್ಥಳೀಯ ನಾಪತ್ತೆಯಾದ ಸ್ಥಳದಲ್ಲಿ ಹುಡುಕಾಟ ನಡೆಸಿದ್ದಾರೆ ಆದರೆ ಯಾವುದೇ ಸುಳಿವು ದೊರೆತಿಲ್ಲ, ಮಾಹಿತಿ ಯಿದ್ದರೂ ಸ್ಥಳಕ್ಕೆ ಭೇಟಿ ನೀಡದ ಕಡಬ ಪೋಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ. ಪೋಲೀಸ್ ಹಾಗೂ ಅಗ್ನಿಶಾಮಕ ದಳದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಮಾರಧಾರಾ ನದಿಯಲ್ಲಿ ಮುಳುಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ