ಬರಗಾಲದ ಸಭೆ: ಮೊಬೈಲ್ ನಲ್ಲೇ ಅಧಿಕಾರಿಗಳು ತಲ್ಲೀನ

Famine Meeting: Officers are busy on mobiles

23-08-2018

ವಿಜಯಪುರ: ಜಿಲ್ಲೆಯಲ್ಲಿ ತೀವ್ರ ಬರಗಾಲ ಹಿನ್ನೆಲೆ, ಬರ ನಿವಾರಣೆ ಬಗ್ಗೆ ಕಂದಾಯ ಮತ್ತು ತೋಟಗಾರಿಕೆ , ಆರೋಗ್ಯ ಇಲಾಖೆ ಸಚಿವರುಗಳು ಸಭೆ ನಡೆಸಿದ್ದು. ಈ ವೇಳೆ ಅಧಿಕಾರಿಗಳು ಬೇಜವಾಬ್ದಾರಿ ಪ್ರದರ್ಶಿಸಿದ್ದಾರೆ. ಸಭೆಯಲ್ಲಿ ತಮಗೇನು ಸಂಬಂಧವೇ ಇಲ್ಲ ಎನ್ನುವಂತೆ ಕೆಲ ಅಧಿಕಾರಿಗಳು ವರ್ತನೆ ತೋರಿದ್ದಾರೆ.

ಜಿಲ್ಲೆಯಲ್ಲಿ ತೀವ್ರ ಬರಗಾಲ ಹಿನ್ನೆಲೆ, ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಧಿಕಾರಿಗಳೊಂದಿಗೆ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಸಭೆ ಏರ್ಪಡಿಸಿದ್ದರು. ಆದರೆ, ಸಭೆಯಲ್ಲಿ ಅಧಿಕಾರಿಗಳು ಮೊಬೈಲ್ ಬಳಸುವುದರಲ್ಲೇ ತಲ್ಲೀನರಾಗಿದ್ದರು. ಸಭೆಯ ಗಂಭೀರತೆ ಅರಿಯದ ಕೆಲ ಅಧಿಕಾರಿಗಳು ಸಭೆಗೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸಿದ್ದಾರೆ.

ವೇದಿಕೆ ಮೇಲೆ ಸಚಿವರ ಗಂಭೀರ ಚರ್ಚೆ ನಡೆಯುತ್ತಿದ್ದರೆ, ಇತ್ತ ಮೊಬೈಲ್ ನಲ್ಲಿ ಫೋಟೊ ತೆಗೆದು ವಾಟ್ಸಾಪ್ ಮೂಲಕ ಅಪಲೋಡ್ ಮಾಡುತ್ತಿದ್ದರು ಅಧಿಕಾರಿಗಳು. ಸಚಿವರ ಸಭೆಗಿಂತ ಫೋಟೊ ತೆಗೆದು ಸೆಂಡ್ ಮಾಡುವುದೆ ಅಧಿಕಾರಿಗಳಿಗೆ ಮುಖ್ಯ ಎಂಬಂತೆ ಸಭೆಯಲ್ಲಿ ಅಧಿಕಾರಿಗಳು ಬೇಜವಾಬ್ದಾರಿ ಪ್ರದರ್ಶಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

R.V.Deshpande meeting ವೇದಿಕೆ ಅಧಿಕಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ