ರಾಡ್ ನಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ

fighting between friends: assault with rod

23-08-2018

ಬೆಂಗಳೂರು: ಇಬ್ಬರು ಸ್ನೇಹಿತರು ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿಕೊಂಡು ಓರ್ವನ ತಲೆಗೆ ರಾಡ್‍ನಿಂದ ಹಲ್ಲೆ ಮಾಡಲಾಗಿರುವ ಘಟನೆ ಆರ್.ಎಂ.ಸಿ.ಯಾರ್ಡ್‍ನ ಕಂಠೀರವ ಮೈದಾನದ ಲಾರಿ ನಿಲ್ದಾಣದ ಬಳಿ ನಿನ್ನೆ ರಾತ್ರಿ ನಡೆದಿದೆ.

ಹಲ್ಲೆಯಿಂದ ಗಾಯಗೊಂಡಿರುವ ಸಂಜಯ್ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರಾತ್ರಿ 11.45ರ ವೇಳೆ ಪ್ರೀತಮ್ ಹಾಗೂ ಸಂಜಯ್ ಲಾರಿ ನಿಲ್ದಾಣದ ಬಳಿ ಬಂದಿದ್ದು, ಕ್ಷುಲ್ಲಕ ವಿಚಾರಕ್ಕೆ ಮಾಡಿಕೊಂಡ ಜಗಳ ವಿಕೋಪಕ್ಕೆ ತಿರುಗಿದಾಗ ಪ್ರೀತಮ್, ಸಂಜಯ್ ತಲೆಗೆ ರಾಡ್‍ನಿಂದ ಹೊಡೆದು ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿರುವ ಆರ್.ಎಂ.ಸಿ. ಯಾರ್ಡ್ ಪೆÇಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Rod Assault ಪ್ರಾಣಾಪಾಯ ಪ್ರಕರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ