‘ಕಾಲೇಜಿಗೆ ಚಕ್ಕರ್ ಹೊಡೆದು ಅಣ್ಣಾವ್ರ ಸಿನೆಮಾ ನೋಡಿದ್ದೆ’23-08-2018

ಬೆಂಗಳೂರು: ಸ್ಯಾಂಡಲ್ ವುಡ್ ನ ‘ರಾಜು ಜೇಮ್ಸ್ ಬಾಂಡ್’ ಸಿನೆಮಾ ಮುಹೂರ್ತಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಆಗಮಿಸಿದ್ದರು. ಕ್ಯಾಮೆರಾ ಗೆ ಚಾಲನೆ ನೀಡಿದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಮಾತನಾಡಿ, ‘ಅಣ್ಣಾವ್ರ ಕಾಲದಲ್ಲೇ ‘ಜೇಮ್ಸ್ ಬಾಂಡ್ ಸಿರೀಸ್ ಸಿನೆಮಾಗಳು ಬಂದಿದ್ದವು. ಅಂದಿನ ಕಾಲದಲ್ಲಿಯೇ ಅಂತಹ ಪ್ರಯತ್ನ ಮಾಡಲಾಗಿತ್ತು. ಅಣ್ಣಾವ್ರ ಸಿನೆಮಾಗಳನ್ನು ನೋಡಲು ಕಾಲೇಜಿಗೆ ಚಕ್ಕರ್ ಹೊಡೆದು ಹೋಗಿದ್ದೇವೆ ಎಂದು ತಮ್ಮ ಕಾಲೇಜಿನ ದಿನಗಳನ್ನು ಸ್ಮರಿಸಿಕೊಂಡರು. ಸಿನೆಮಾ ರಂಗಕ್ಕೆ ನಾವು ಪ್ರೋತ್ಸಾಹ ನೀಡುತ್ತೇವೆ ಎಂದು, ‘ರಾಜು ಜೇಮ್ಸ್ ಬಾಂಡ್ ಸಿನಿಮಾ ತಂಡಕ್ಕೆ ಶುಭ ಹಾರೈಸಿದರು.

ಇನ್ನು ಎಐಸಿಸಿ ಅಧ್ಯರನ್ನು ಭೇಟಿಯಾಗಲು ದೆಹಲಿಗೆ ತೆರಳುವ ಜಿ.ಪರಮೇಶ್ವರ್, ಕಾಂಗ್ರೆಸ್ ನಿಂದ ಸಮನ್ವಯ ಸಮಿತಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರನ್ನು ನೇಮಕ ಮಾಡುವ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಜಿ.ಟಿ.ದೇವೇಗೌಡರು ‘ಅಣ್ಣಾವ್ರ ಸಿನೆಮಾ ಬಂಗಾರದ ಮನುಷ್ಯ ಚಿತ್ರವನ್ನ ಒಂಬತ್ತು ಬಾರಿ ನೋಡಿದ್ದೇನೆ. ಆ ಸಿನೆಮಾ ನನ್ನ ಜೀವನಕ್ಕೆ ಸ್ಪೂರ್ತಿಯಾಯಿತು. ಆ ಕಾಲದಲ್ಲಿ ಜೀವನಕ್ಕೆ ಬೇಕಾಗುವ ಸಂದೇಶಗಳು ಸಿಗುತ್ತಿದ್ದವು, ಅಂತಹ ಸಂದೇಶ ಹಾಗೂ ಜೀವನಕ್ಕೆ ಉಪಯೋಗಕಾರಿ ಅಂಶಗಳು ನಿಮ್ಮ ಸಿನಿಮಾದಲ್ಲಿ ಇರಲಿ, ಹಾಗೂ ಜಿ.ಪರಮೇಶ್ವರ ಅವರು ಹೇಳಿದ ಹಾಗೆ ಕನ್ನಡ ಚಿತ್ರರಂಗಕ್ಕೆ ಸರ್ಕಾರದಿಂದ ಪ್ರೋತ್ಸಾಹ ಇದ್ದೇ ಇರತ್ತದೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ