ಬಿಜೆಪಿ ಕಚೇರಿಯಿಂದ ಪಶ್ಚಿಮ ವಾಹಿನಿ ಕಡೆ ಅಟಲ್‌ ಜೀ ಅಸ್ಥಿ ಕಳಶ

Atal bihari vajpayee

23-08-2018

ಬೆಂಗಳೂರು: ಮಾಜಿ ಪ್ರಧಾನಿ ಅಟಲ್‍ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಶ್ರೀರಂಗಪಟ್ಣದ ಪಶ್ಚಿಮ ವಾಹಿನಿಯಲ್ಲಿ ವಿಸರ್ಜನೆ ಮಾಡಲು ರಾಜ್ಯ ಬಿಜೆಪಿ ಕಚೇರಿಯಿಂದ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಯಿತು.

ಬೆಳಿಗ್ಗೆ 9.45ಕ್ಕೆ ಸರಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮಲ್ಲೇಶ್ವರಂ ನಲ್ಲಿರುವ ಪಕ್ಷದ ಕಚೇರಿ ಮುಂದೆ ಚಿತಾಭಸ್ಮಕ್ಕೆ ಪುಷ್ಪಾರ್ಪಣೆ ನೆರವೇರಿಸಿ ಶ್ರೀರಂಗಪಟ್ಟಣದ ಕಡೆ ಮೆರವಣಿಗೆ ಸಾಗಿತು. ಈ ವೇಳೆ ಕೇಂದ್ರ ಸಚಿವ ಅನಂತ್ ಕುಮಾರ್, ಮಾಜಿ ಡಿಸಿಎಂ ಆರ್.ಅಶೋಕ್, ಸಂಸದೆ ಶೋಭಾ ಕರಂದ್ಲಾಜೆ ಯಡಿಯೂರಪ್ಪಗೆ ಸಾತ್ ನೀಡಿದ್ದು ನೂರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಪಕ್ಷದ ಕಚೇರಿಯಿಂದ ಹೊರಟ ಚಿತಾಭಸ್ಮ ಕಳಶ ಹೊಂದಿದ ವಾಹನ ಕಾಡುಮಲ್ಲೇಶ್ವರ ದೇವಸ್ಥಾನ, ಮಾರ್ಗೋಸಾ ರಸ್ತೆ, ನವರಂಗ್ ವೃತ್ತ, ರಾಜಕುಮಾರ್ ರಸ್ತೆ, ರಾಜಾಜಿನಗರ ಪ್ರವೇಶ, ವಿಜಯನಗರ-ಗಾಳಿ ಆಂಜನೇಯ ದೇವಸ್ಥಾನ, ರಾಜರಾಜೇಶ್ವರಿ ನಗರ ವೃತ್ತ, ಕೆಂಗೇರಿ ಮೂಲಕ ಮೆರವಣಿಗೆ ಸಾಗಿತು. ಎಲ್ಲ ಕಡೆಗಳಲ್ಲೂ ನೂರಾರು ಜನರು, ಸ್ವಾಮೀಜಿಗಳು ಅಟಲ್ ಜೀ ಅಸ್ಥಿ ಕಳಶಕ್ಕೆ ಪುಷ್ಪಾರ್ಚನೆ ಮಾಡಿದರು. ಅಸ್ಥಿ ಕಳಶದ ಮೆರವಣಿಗೆಯು ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮೂಲಕ ಶ್ರೀರಂಗಪಟ್ಟಣ ತಲುಪಲಿದ್ದು, ಶಾಸ್ತ್ರೋಕ್ತವಾಗಿ ಪಶ್ಚಿಮ ವಾಹಿನಿಯಲ್ಲಿ ಅಸ್ಥಿಯನ್ನು ವಿಸರ್ಜನೆ ಮಾಡಲಾಗುತ್ತದೆ.


ಸಂಬಂಧಿತ ಟ್ಯಾಗ್ಗಳು

Atal bihari vajpayee Srirangapatna ಮೆರವಣಿಗೆ ಸ್ವಾಮೀಜಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ