ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ನಿಧನ

Veteran journalist Kuldip Nayar passed away

23-08-2018

ಬೆಂಗಳೂರು: ಹಿರಿಯ ಲೇಖಕ ಹಾಗು ಪತ್ರಕರ್ತ ಕುಲದೀಪ್ ನಯ್ಯರ್ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ತುರ್ತುಪರಿಸ್ಥಿತಿ ವಿರುದ್ಧ ಧ್ವನಿ ಎತ್ತಿದ ಪತ್ರಕರ್ತರಲ್ಲಿ ನಯ್ಯರ್ ಅವರು ಮುಂಚೂಣಿಯಲ್ಲಿದ್ದರು.

ಮಾನವ ಹಕ್ಕುಗಳ ಕುರಿತು ಅತೀವ ಕಾಳಜಿ ಹೊಂದಿದ್ದ ಅವರು ಭಾರತ-ಪಾಕಿಸ್ತಾನ ಸಂಬಂಧ ಸುಧಾರಣೆಯಾಗಬೇಕೆಂಬ ತೀವ್ರ ಹಂಬಲ ಹೊಂದಿದ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿಕೊಂಡಿದ್ದಾರೆ. ನಯ್ಯರ್ ಅವರ ನಿಧನದಿಂದ ನಾವು ಒಬ್ಬ ಶ್ರೇಷ್ಠ, ನಿಷ್ಠುರ ಪತ್ರಕರ್ತನನ್ನು ಕಳೆದುಕೊಂಡಂತಾಗಿದೆ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kuldeep Nayyar journalist ಹಂಬಲ ಭಾರತ-ಪಾಕಿಸ್ತಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ