ವಿಜಯಪುರದ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಅವರ ನಾಮಕರಣ !

Kannada News

01-06-2017

ಕೊಪ್ಪಳ :- ವಿಜಯಪುರದ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಅವರ ನಾಮಕರಣ ಮಾಡುವ ಹಿನ್ನೆಲೆಯಲ್ಲಿ, ಮೇ ೧೧ ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ.  ವಿಶ್ವವಿದ್ಯಾಲಯದಲ್ಲಿ ಏಳು ಜನ ಮಹಿಳಾ ಸಾಧಕಿಯರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಅವುಗಳಲ್ಲಿ  ಅಕ್ಕಮಹಾದೇವಿ, ಮದರ್ ಥೆರೆಸಾ, ಸಾವಿತ್ರಿಬಾಯಿ ಫುಲೆ, ಹೇಮರಡ್ಡಿ ಮಲ್ಲಮ್ಮ, ಕಿತ್ತೂರ ರಾಣಿ ಚೆನ್ನಮ್ಮ ಮೂರ್ತಿಗಳನ್ನು ಸ್ಥಾಪಿಸಲಾಗಿದೆ.  ಈ ಕಾರ್ಯಕ್ರಮಕ್ಕೆ ಬರಲು 10 ಜಿಲ್ಲೆಗಳಿಂದ 1300 ಬಸ್ ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ 20 ಕ್ಕೂ ಹೆಚ್ಚು ನಾಡಿನ ಸ್ವಾಮಿಗಳು ಹಾಗೂ ಸಾಹಿತಿಗಳು ಭಾಗಿಯಾಗಲಿದ್ದಾರೆ. ಸುಮಾರು 60 ಸಾವಿರ ಮಹಿಳೆಯರು ಸೇರುವ  ನೀರಿಕ್ಷೆ ಇದೆ . ನಮ್ಮ ರಾಜ್ಯದಲ್ಲಿ 52 ವಿಶ್ವವಿದ್ಯಾಲಯಗಳಿವೆ. ವಿಶ್ವವಿದ್ಯಾಲಯಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ, ಸಚಿವನಾಗಿ ನಾನು ವಿವಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದಿಲ್ಲ ಈ ಅಧಿವೇಶನದಲ್ಲಿ ನೂತನ ಉನ್ನತ ಶಿಕ್ಷಣ ಕಾಯ್ದೆ ಜಾರಿಯಾಗಲಿದೆ, ಅಲ್ಲದೆ ಬಿಜೆಪಿ ಮುಖಂಡರು ಇತ್ತೀಚಿಗೆ ತಮ್ಮ ವಿರುದ್ದ ಮಾತನಾಡಿದವರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ