'ಭಟ್ಟರ ಸ್ಕಾಚ್’ ವಿರುದ್ಧ ಸಿಡಿದೆದ್ದ ನೆಟ್ಟಿಗರು!

Social media campaign against

22-08-2018

ಬೆಂಗಳೂರು: ಖಾಸಗಿ ಪತ್ರಿಕೆಯೊಂದರಲ್ಲಿ ಪ್ರಕಟವಾಗುವ "ಭಟ್ಟರ್ ಸ್ಕಾಚ್" ಎಂಬ ಹಾಸ್ಯ ಅಂಕಣ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಸಂಪಾದಕರ ವಿರುದ್ಧ ಆಕ್ರೋಶ ತೀವ್ರಗೊಳ್ಳುತ್ತಿದೆ. ಕಾರಣ ಇಷ್ಟೆ ಮೊನ್ನೆ 'ಭಟ್ಟರ ಸ್ಕಾಚ್’ ಅಂಕಣದಲ್ಲಿ ಹಳ್ಳಿಯ ಅಭಿವೃದ್ಧಿ ಮತ್ತು ಮಹಿಳೆಯರ ವಿಚಾರಕ್ಕೆ ಈ ಅಂಕಣದಲ್ಲಿ ಆಕ್ಷೇಪಾರ್ಹ ಪದಗಳನ್ನು( ಮಹಿಳೆಯರ ಒಳ ಉಡುಪು) ಮತ್ತು ಒಂದಕ್ಕೊಂದನ್ನು ಹೋಲಿಕೆ ಮಾಡಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ‘ಕೆಟ್ಟ ಅರ್ಥ ಬರುವ ರೀಯಲ್ಲಿ ಅದನ್ನು ಬರೆಯಲಾಗಿದೆ’ ಎಂದು ಅದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ. ‘ಮಹಿಳೆಯರನ್ನು ಅಣಕಿಸುವ ರೀತಿಯಲ್ಲಿ ಇದನ್ನು ಬರೆಯಲಾಗಿದೆ’. 'ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಅವಮಾನಿಸಿದ್ದಾರೆ' ಎಂದು ಜಾಡಿಸುತ್ತಿದ್ದಾರೆ ನೆಟ್ಟಿಗರು. ಅಲ್ಲದೆ ಈ ರೀತಿಯಾಗಿ ಬರೆದಿರುವುದಕ್ಕೆ ಕ್ಷಮೆ ಯಾಚನೆಗೆ ಪಟ್ಟು ಹಿಡಿದಿದ್ದಾರೆ.  ಬಳಸಿದ ಒಳ ಉಡುಪು ಎಂದು ಪೋಸ್ಟ್ ಮಾಡುವ ಮೂಲಕ ಅಭಿಯಾನವನ್ನೂ ಆರಂಭಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

news paper columnist ಮಹಿಳೆ ಪ್ರದೇಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ