ಮೇಕೆದಾಟು ಯೋಜನೆಗೆ ಬದ್ಧ: ಸಚಿವ ಸಿ.ಎಸ್.ಪುಟ್ಟರಾಜು

Minister CS Puttaraju reaction on mekedatu project

22-08-2018

ಮಂಡ್ಯ: ಮೇಕೆದಾಟು ಯೋಜನೆಗೆ ಬದ್ಧ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಬದ್ಧ. ಈ ಕುರಿತಂತೆ ಸಿಎಂ ಕುಮಾರಸ್ವಾಮಿ ತಮಿಳುನಾಡು ಸಿಎಂರನ್ನು ಭೇಟಿಯಾಗಲಿದ್ದಾರೆ. ತಮಿಳುನಾಡಿಗೆ ಇಲ್ಲಿನ ವಾಸ್ತವ ಸ್ಥಿತಿ ಮನದಟ್ಟು ಮಾಡಿಕೊಡಲಾಗುವುದು. ಕೆ.ಆರ್.ಎಸ್ ಡ್ಯಾಂನ ನಾಲ್ಕು ಪಟ್ಟು ನೀರು ಸಮುದ್ರಕ್ಕೆ ಹರಿದು ಹೋಗಿದೆ. ಮೇಕೆದಾಟು ಅಣೆಕಟ್ಟೆನಿಂದ ನಾವು ನೀರು ಬಳಸಲು ಆಗಲ್ಲ. ಶೇಖರಣೆಯಾದ ನೀರು ತಮಿಳುನಾಡು ರೈತರಿಗೆ ಬಿಡಲಾಗುತ್ತೆ ಹೀಗಾದರೂ ನೀರು ಉಳಿಯಲಿದೆ. ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಸಿಎಂ ಚಾಲನೆ ಕೊಡುತ್ತಾರೆ. ತಮಿಳುನಾಡು ಜನ ಕೂಡ ಒಪ್ಪುವ ಆಶಾಭಾವನೆ ಇದೆ, ವಾರದಲ್ಲೇ ಈ ಪ್ರಕ್ರಿಯೆ ಚುರುಕುಗೊಳ್ಳಲಿದೆ ಎಂದು ಹೇಳಿದರು.

 


ಸಂಬಂಧಿತ ಟ್ಯಾಗ್ಗಳು

Mekedatu dam ಸಿ.ಎಸ್.ಪುಟ್ಟರಾಜು ನಿರ್ಮಾಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ