ಸರ್ಕಾರಿ ಉದ್ಯೋಗಕ್ಕಾಗಿ ಆಮಿಷ: ಹಣವೂ ಇಲ್ಲ ಕೆಲಸವೂ ಇಲ್ಲ!

fraud for government job: no money and no work!

22-08-2018 255

ಬೆಂಗಳೂರು: ಬ್ಯಾಂಕ್ ಮ್ಯಾನೇಜರ್ ಉದ್ಯೋಗ ಕೊಡಿಸುವುದಾಗಿ ಹೇಳಿ 15 ಲಕ್ಷ ರೂಗಳ ವಂಚಿನೆ ನಡೆಸಿರುವ ಪ್ರಕರಣ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕಾಮಾಕ್ಷಿಪಾಳ್ಯದ ಚೆಲುವರಾಜು ಪುತ್ರ ಕಮಲ್ ರಾಜ್‍ಗೆ ಕೆಲಸ ಕೊಡಿಸುವ ಆಸೆಯಿಂದ 15 ಲಕ್ಷ ಕೊಟ್ಟು ಹಣ ಕಳೆದುಕೊಂಡು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ವಂಚನೆಯ ವಿವರ: ಕಮಲ್‍ ರಾಜ್‍ಗೆ ಎಂಬುವರಿಗೆ ಸರ್ಕಾರಿ ಕೆಲಸ ಕೊಡಿಸಬೇಕು ಎಂದು ಚೆಲುವರಾಜು ತನ್ನ ಸ್ನೇಹಿತನ ಬಳಿ ತಿಳಿಸಿದ್ದರು, ಆಗ ಸ್ನೇಹಿತ ತನಗೆ ಶ್ರೀಕಾಂತ್ ಶೆಟ್ಟಿ ಎಂಬುವರ ಪರಿಚಯವಿದೆ, ಅವರಿಗೆ ದೊಡ್ಡ ದೊಡ್ಡ ವ್ಯಕ್ತಿಗಳ ಪರಿಚಯ ಸಹ ಇದೆ. ಅವರ ಜೊತೆ ಮಾತನಾಡಿದರೆ ನಿಮ್ಮ ಮಗನಿಗೆ ಕೆಲಸ ಗ್ಯಾರಂಟಿ ಎಂದು ಬ್ಯಾಂಕೊಂದರಲ್ಲಿ ಮ್ಯಾನೇಜರ್ ಹುದ್ದೆ ಕೊಡಿಸುವುದಾಗಿ ನಂಬಿಸಿದ್ದನು. ಅದಕ್ಕಾಗಿ 20 ಲಕ್ಷ ರೂಪಾಯಿ ಹಣವನ್ನ ಕೊಡಬೇಕು. ಅದರಲ್ಲಿ 15 ಲಕ್ಷ ಸೆಕ್ಯುರಿಟಿ ಡೆಪಾಸಿಟ್, 5 ಲಕ್ಷ ನೇಮಕಾತಿ ಪ್ರತ್ರಕ್ಕೆ ಕೊಡಬೇಕು ಎಂದು ನಂಬಿಸಲಾಗಿತ್ತು.

ಅದರಂತೆ ಚೆಲುವರಾಜು 15 ಲಕ್ಷ ರೂಪಾಯಿ ಹಣವನ್ನ ಶ್ರೀಕಾಂತ್ ಗೆ ಕೊಟ್ಟಿದ್ದು ಕಳೆದ ಎರಡು ವರ್ಷಗಳಿಂದ ಇಲ್ಲ ಸಲ್ಲದ ಸಬೂಬು ಹೇಳಿ ಶ್ರೀಕಾಂತ್ ತಪ್ಪಿಸಿಕೊಳ್ಳುತ್ತಿದ್ದನು.ಇತ್ತ ಹಣವೂ ಇಲ್ಲದೇ, ಕೆಲಸವೂ ಇಲ್ಲದೆ ಚೆಲುವರಾಜು ಕಂಗಾಲಾಗಿದ್ದಾರೆ. ನಂತರ ಹಣ ಕೊಡುವಂತೆ ತೀರಾ ಒತ್ತಡ ಹಾಕಿದ್ದರಿಂದ ಶ್ರೀಕಾಂತ್ ಚೆಕ್ ನೀಡಿದ್ದನು ಆದರೆ  ಬ್ಯಾಂಕ್ ಗೆ ಹೋಗಿ ನೋಡಿದಾಗ ಚೆಕ್ ಬೌನ್ಸ್ ಆಗಿರೋದು ತಿಳಿದು ಬಂದಿದೆ. ಮತ್ತೆ ವಿಚಾರಿಸಲು ಹೋದಾಗ ಚೆಲುವರಾಜು ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿದ್ದಾರೆ. ಈ ಘಟನೆ ಕುರಿತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

government job fraude ಸಬೂಬು ಬೆದರಿಕೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ