ಕಾಟನ್ ಪೇಟೆಯಲ್ಲಿ ವ್ಯಕ್ತಿಯೊಬ್ಬರ ಭೀಕರ ಕೊಲೆ

Horrific murder at cottonpet

22-08-2018

ಬೆಂಗಳೂರು: ಕುಡಿದ ಅಮಲಿನಲ್ಲಿ ಜಗಳ ಮಾಡಿಕೊಂಡ ಮೂವರು ಯುವಕರ ಜಗಳ ವಿಕೋಪಕ್ಕೆ ತಿರುಗಿ ಓರ್ವನನ್ನು  ಕೈನಿಂದ ಗುದ್ದಿ, ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ನಿನ್ನೆ ರಾತ್ರಿ ಕಾಟನ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ತನ್ ಲೈನ್ ಮೊಹಲ್ಲಾ ಬಳಿ ನಡೆದಿದೆ.

ಕಾಟನ್‍ ಪೇಟೆಯ ಚಲವಾದಿ ಪಾಳ್ಯದ ರಾಕೇಶ್ (24)ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ. ರಾತ್ರಿ ತನ್ ಲೈನ್ ಮೊಹಲ್ಲಾ ಬಳಿ ರಂಜಿತ್, ಮಣಿ ಜೊತೆಗೆ ಬಂದಿದ್ದ ರಾಕೇಶ್ ಮದ್ಯ ಸೇವನೆ ಮಾಡಿದ್ದಾರೆ. ಮದ್ಯದ ಅಮಲಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಜಗಳ ಉಂಟಾಗಿ ಆಕ್ರೋಶಗೊಂಡ ಮಣಿ ಹಾಗೂ ರಂಜಿತ್ ಸೇರಿ ರಾಕೇಶ್‍ಗೆ ಕೈನಿಂದ ಗುದ್ದಿ, ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ದಾವಿಸಿದ ಕಾಟನ್‍ಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಕೊಲೆ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ಕೊಲೆಯಾದ ರಾಕೇಶ್ ಮಿನರಲ್ ವಾಟರ್ ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದ. ಕೊಲೆಗೈದವರು ಆತನ ಸ್ನೇಹಿತರೇ ಆಗಿದ್ದಾರೆ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ.

 


ಸಂಬಂಧಿತ ಟ್ಯಾಗ್ಗಳು

cottonpet murder ಪ್ರಾಥಮಿಕ ಆರೋಪಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ