ತಾಂತ್ರಿಕ ದೋಷದಿಂದ ಮೆಟ್ರೋ ರೈಲು ವಿಳಂಬ: ಟ್ವೀಟರ್ ನಲ್ಲಿ ಸ್ಪಷ್ಟನೆ

Metro train delay due to technical error: clarification on twitter

22-08-2018

ಬೆಂಗಳೂರು: ನಗರದ ಯಲಚೇನಹಳ್ಳಿಯಿದ ಹೊರಡಬೇಕಿದ್ದ ನಮ್ಮ ಮೆಟ್ರೋದಲ್ಲಿ ಇಂದು ಬೆಳಿಗ್ಗೆ ಉಂಟಾದ ತಾಂತ್ರಿಕ ದೋಷದಿಂದ ಕೆಲ ನಿಮಿಷಗಳ ಕಾಲ ಮೆಟ್ರೋ ರೈಲು ಸಂಚಾರದಲ್ಲಿ ವಿಳಂಬವಾಗಿತ್ತು. ಯಲಚೇನಹಳ್ಳಿ ಮತ್ತು ಆರ್.ವಿ.ರಸ್ತೆಯ ಹಸಿರು ಲೈನ್‍ನ ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಮೆಟ್ರೋ ರೈಲಿನ ಮೂರನೇ ಬೋಗಿಯಲ್ಲಿ ಕಂಡು ಬಂದ ತಾಂತ್ರಿಕ ಸಮಸ್ಯೆಯನ್ನು ಮೆಟ್ರೋ ಸಿಬ್ಬಂದಿ ಬಗೆಹರಿಸಿದ್ದು, ಇದರಿಂದ ಮುಂಜಾನೆ 6 ಗಂಟೆಗೆ ಹೊರಡಬೇಕಿದ್ದ ರೈಲು 6.30ಕ್ಕೆ ಸಂಚಾರ ಆರಂಭಗೊಂಡಿದೆ. ತಾಂತ್ರಿಕ ದೋಷದಿಂದ ಉಂಟಾದ ಸಮಸ್ಯೆಯನ್ನು ನಮ್ಮ ಮೆಟ್ರೋ ತನ್ನ ಟ್ಟೀಟ್ಟರ್ ಖಾತೆಯಲ್ಲಿ ಹೇಳಿಕೊಂಡಿದೆ.


ಸಂಬಂಧಿತ ಟ್ಯಾಗ್ಗಳು

Metro Technical ಸಂಚಾರ ಮುಂಜಾನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ