ಕೊಡಗಿಗಾಗಿ ದೇಣಿಗೆ ಸಂಗ್ರಹಿಸಿದ 3 ವರ್ಷದ ಬಾಲಕ

3 year old boy collecting donations for the kodagu flood

22-08-2018

ಬಾಗಲಕೋಟೆ: ಕೊಡಗಿನಲ್ಲಿ ಸಂಭವಿಸಿದ ಪ್ರವಾಹಕ್ಕೆ ಕರುನಾಡೇ ಮಿಡಿದಿದೆ. ರಾಜ್ಯದ ಜನತೆ ತಮ್ಮ ಕೈಲಾದಷ್ಟು ಧನ ಸಹಾಯ, ದಿನ ನಿತ್ಯದ ಸಾಮಗ್ರಿಗಳು, ಆಹಾರ ಸಾಮಗ್ರಿಗಳು, ಕುಡಿಯು ನೀರು ಪೂರೈಸಿದ್ದರು. ಸಂಘ ಸಂಸ್ಥೆಗಳು, ಸ್ವಯಂ ಸೇವಕರು ನೆರವಿಗೆ ಧಾವಿಸಿದ್ದರು. ಕೊಡಗಿಗೆ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ ಮಾಡುವಲ್ಲಿ ಯಾರೂ ಹಿಂಜರಿಯಲಿಲ್ಲ. ನಿನ್ನಯಷ್ಟೇ ಹಂಪಿ ವಿಶ್ವವಿದ್ಯಾಲಯದ ಕುಲಪತಿ ಮಲ್ಲಿಕಾ ಘಂಟಿ ಸ್ವತಃ ತಾವೇ ದೇಣಿಗೆ ಸಂಗ್ರಹಿಸಿದ್ದರು. 

ಇನ್ನು ಕೆಲವೊಂದೆಡೆ ಪುಟ್ಟ ಮಕ್ಕಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೂಡಿಟ್ಟ ಹಣವನ್ನೂ ಕೊಟ್ಟಿದ್ದರು. ಈ ರೀತಿಯ ಹಲವಾರು ಘಟನೆಗಳು ನಮ್ಮ ಕಣ್ಣ ಮುಂದೆ ಬರುತ್ತವೆ. ಅದರಂತೆ ಬಾಗಲಕೋಟೆಯಲ್ಲಿ ಕೊಡಗು ಸಂತ್ರಸ್ತರ ನೆರವಿಗೆ ಸುಳ್ಳ ಗ್ರಾಮದ 3 ವರ್ಷದ ಗಣೇಶ ಮತ್ತು 4 ವರ್ಷದ ಸೌಜನ್ಯಳಿಂದ ದೇಣಿಗೆ ಸಂಗ್ರಹ ಮಾಡಿದ್ದಾರೆ. ತಮ್ಮ ಊರಲ್ಲಿ ನೆರವಿಗೆ ಧಾವಿಸಿದ ಎಲ್.ಕೆ.ಜಿ ಮಕ್ಕಳು, ಶಾಲೆಗೆ ರಜೆ ಇರೋದನ್ನ ದೇಣಿಗೆ ಸಂಗ್ರಹಣೆಯಲ್ಲಿ ಸದ್ಭಳಕೆ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ.

ಕೊಡಗಿನ ಜನರ ಸಂಕಷ್ಟಕ್ಕೆ ನೆರವಾಗುವಂತೆ ಮಕ್ಕಳು ಮನವಿ ಮಾಡುತ್ತಿದ್ದಾರೆ. ಪುಟ್ಟ ಮಕ್ಕಳ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಬಸಪ್ಪ ಕಡ್ಲಿಮಟ್ಟಿ, ಮತ್ತು ನಿಂಗಬಸವ್ವ ದಂಪತಿಗಳ ಮಕ್ಕಳಾದ ಇವರಿಗೆ ತಂದೆ-ತಾಯಿ ಸಾಥ್ ನೀಡಿದ್ದಾರೆ. ಮಕ್ಕಳ ಕಾರ್ಯಕ್ಕೆ ಹರ್ಷಗೊಂಡ ಜನ ಖುಷಿಯಿಂದ ದೇಣಿಗೆ ಹಾಕುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

LKG Flood ಸಾರ್ವಜನಿಕ ತಂದೆ-ತಾಯಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ