ರಾಜ್ಯಾದ್ಯಂತ ಬಕ್ರಿದ್ ಸಂಭ್ರಮಾಚರಣೆ

bakrid celebrations at hubballi

22-08-2018

ಹುಬ್ಬಳ್ಳಿ: ತ್ಯಾಗ ಬಲಿದಾನ ಪ್ರತೀಕದ ಬಕ್ರೀದ್ ಹಬ್ಬದ ಹಿನ್ನೆಲೆ ಇಂದು ಮುಸ್ಲಿಂ ಬಾಂಧವರೆಲ್ಲರೂ ರಾಜ್ಯಾದ್ಯಂತ ಸಂಭ್ರಮದಿಂದ ಬಕ್ರೀದ್ ಹಬ್ಬನ್ನು ಆಚರಿಸುತ್ತಿದ್ದಾರೆ. ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್ ಬಳಿ ಇರುವ ಈದ್ಗಾ ಮೈದಾನದಲ್ಲಿ ಶ್ರದ್ಧಾ ಭಕ್ತಿಯಿಂದ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು ಒಬ್ಬರನ್ನೊಬ್ಬರು ಶುಭಹಾರೈಸಿಕೊಂಡು ಖುಷಿಪಟ್ಟರು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ಕಲಬುರಗಿಯಲ್ಲಿಯೂ ಸಂಭ್ರಮದಿಂದ ಬಕ್ರೀದ್ ಹಬ್ಬ ಆಚರಣೆಯಲ್ಲಿ ತೊಡಗಿದ್ದರು. ಈದ್ಗಾ ಮೈದಾಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಆಲಂಗಿಸಿಕೊಲ್ಳುವ ಮೂಲಕ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು.

ಕರಾವಳಿಯಲ್ಲಿ ಬಕ್ರೀದ್ ಸಂಭ್ರಮಕ್ಕೆ ಬಾವುಟಗುಡ್ಡೆಯಲ್ಲಿರುವ ಈದ್ಗಾ ಮೈದಾನ ಸಾಕ್ಷಿಯಾಯಿತು. ಜನಸಾಮಾನ್ಯರೊಂದಿಗೆ ಸಾಮೂಹಿಕ ಪ್ರಾರ್ಥನೆಯಲ್ಲಿ ಸಚಿವ ಯು.ಟಿ.ಖಾದರ್ ಭಾಗಿಯಾಗಿದ್ದರು.

ಬೀದರ್ನಲ್ಲೂ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ನಗರದ ಈದ್ಗಾ ಮೈದಾನಗಳಲ್ಲಿ ‌ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಬಕ್ರೀದ್ ಹಬ್ಬ ಆಚರಣೆಯಲ್ಲಿ ತೊಡಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

bakrid Muslim ಪ್ರಾರ್ಥನೆ ಸಾಮೂಹಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ