ಸರಿಯಾಗಿ ಕೆಲಸ ಮಾಡಿ ಇಲ್ಲ ಮನೆಗೆ ಹೊರಡಿ: ಕೊಡಗು ಡಿಸಿ

Do your work actively or go to home: Kodagu DC

22-08-2018

ಮಡಿಕೇರಿ: ಭಾರೀ ಪ್ರವಾಹಕ್ಕೀಡಾಗಿರುವ ಕೊಡಗಿನಲ್ಲಿ ಇದೀಗ ಪರಿಹಾರ ಕಾರ್ಯಗಳು ಚುರುಕುಗೊಂಡಿದ್ದು, ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಧಿಕಾರಿ ತುರ್ತು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಯ ಇತರೆ ಅಧಿಕಾರಿಗಳು  ಭಾಗಿಯಾಗಿದ್ದರು. ಸಭೆಯಲ್ಲಿ ಪರಿಹಾರ ಕಾರ್ಯಗಳು ಹಾಗೂ ನೆರೆ ಸಂತ್ರಸ್ತರ ರಕ್ಷಣೆ ಕುರಿತು ಚರ್ಚೆ ನಡೆಸಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಿಂದ ಬರುತ್ತಿರುವ ಅಗತ್ಯ ಸಾಮಾಗ್ರಿಗಳು, ನೆರೆ ಸಂತ್ರಸ್ತರಿಗೆ ತಲುಪಿಸುವಂತೆ ಸೂಚಿಸಿದ್ದಾರೆ.

ಇದೇ ವೇಳೆ ಪ್ರವಾಹ ಪೀಡಿತ ಪ್ರದೇಶದಲ್ಲಿ ಅಧಿಕಾರಿಗಳ ಕಾರ್ಯವೈಖರಿಗೆ ಜಿಲ್ಲಾಧಿಕಾರಿ ಗರಂ ಆಗಿದ್ದಾರೆ. ಜಿಲ್ಲಾಡಳಿತ ತುರ್ತು ಸಭೆಯಲ್ಲಿ ಅಧಿಕಾರಿಗಳಿಗೆ ಡಿಸಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ‘ಸರಿಯಾಗಿ ಕೆಲಸ ಮಾಡದಿದ್ದರೆ ಮನೆಗೆ ಹೊರಡಿ, ಸರಿಯಾಗಿ ಕೆಲಸ ಮಾಡದ ಮೂರು ಜನರನ್ನು ನಿನ್ನೆ ತೆಗೆದು ಹಾಕಲಾಗಿದೆ. ನೀವು ಅಷ್ಟೆ ಕೆಲಸ ಮಾಡದಿದ್ದರೆ ಮುಲಾಜೇ ಇಲ್ಲ, ಅಧಿಕಾರಿ ಇದೆ ಅಂತ ದುರುಪಯೋಗ ಮಾಡಿಕೊಳ್ಳಬೇಡಿ, ಫುಲ್ ಆ್ಯಕ್ಟಿವ್ ಆಗಿ ಕೆಲಸ ಮಾಡೋಕೆ ರೆಡಿಯಾಗಿರಿ' ಎಂದು ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

kodagu Sreevidya ದುರುಪಯೋಗ ತುರ್ತು ಸಭೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ