ಕೊಡಗಿಗೆ ಬಿಜೆಪಿಯಿಂದ ಪರಿಹಾರ ಸಾಮಗ್ರಿ

Necessary items to kodagu flood affected people from BJP

21-08-2018

ಬೆಂಗಳೂರು: ಕೊಡಗು ನೆರೆ ಪೀಡಿತ ಜನರ ನೆರವಿಗೆ ಧಾವಿಸಿರುವ ಬಿಜೆಪಿ ಸಮರೋಪಾದಿಯಲ್ಲಿ ಅವಶ್ಯಕ ಸಾಮಗ್ರಿಗಳನ್ನು ಕೊಡಗು ಜಿಲ್ಲೆಗೆ ರವಾನಿಸುತ್ತಿದೆ. 15ಕ್ಕೂ ಹೆಚ್ಚು ಟ್ರಕ್ ಗಳಲ್ಲಿ ಸಾಮಗ್ರಿಗಳನ್ನು ಇಂದು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಿಂದ ಸಾಮಗ್ರಿಗಳನ್ನು ಸಾಗಿಸಲಾಯಿತು.

ಕೇಂದ್ರ ಸಚಿವ ಅನಂತಕುಮಾರ್, ಆರ್.ಅಶೋಕ್ ಮತ್ತು ಇತರ ಶಾಸಕರು ಟ್ರಕ್ ಗಳಿಗೆ ನಿಶಾನೆ ತೋರಿಸಿದರು. ಸ್ವತಃ ಅಶೋಕ್ ಅವರೇ ಮಡಿಕೇರಿಗೆ ತೆರಳಿ ಸ್ಥಳೀಯ ಶಾಸಕರು ಮತ್ತು ಕಾರ್ಯಕರ್ತರೊಂದಿಗೆ ಸಮನ್ವಯದಿಂದ ಅಗತ್ಯ ವಸ್ತುಗಳನ್ನು ಸಂತ್ರಸ್ತರ ಮನೆಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಗಮನಿಸಲಿದ್ದಾರೆ.

ಜೊತೆಗೆ ಅಗತ್ಯವಿರುವ ಕಡೆಗಳಲ್ಲಿ ಶಾಲಾ ಕಟ್ಟಡ ನಿರ್ಮಿಸಿಕೊಡುವ ಬಗ್ಗೆಯೂ ಗಂಭೀರ ಚಿಂತನೆ ನಡೆಸಿರುವುದಾಗಿ ತಿಳಿಸಿದ್ದಾರೆ. ಕೊಡಗಿನ ನೆರೆ ಸಂತ್ರಸ್ತರಿಗೆ ಮೂರು ಹಂತಗಳಲ್ಲಿ ಪರಿಹಾರ ಅಗತ್ಯವಿದೆ ಎಂದು ಕೇಂದ್ರ ಸಚಿವ ಅನಂತ ಕುಮಾರ್ ತಿಳಿಸಿದರು. ಬೆಂಗಳೂರಿನ ಶಾಸಕರು ಇದೀಗ ಎರಡನೇ ಹಂತದ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಅವರೊಂದಿಗೆ ಚರ್ಚಿಸಿ ಕೊಡಗಿಗೆ ಪರಿಹಾರ ದೊರಕಿಸಲು ಯತ್ನಿಸುವುದಾಗಿ ಅನಂತಕುಮಾರ್ ಇದೇ ಸಂದರ್ಭದಲ್ಲಿ ಹೇಳಿದರು.


ಸಂಬಂಧಿತ ಟ್ಯಾಗ್ಗಳು

kodagu flood ಪರಿಹಾರ ನರೇಂದ್ರ ಮೋದಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ