ಪರಿಷತ್ ಮಾಜಿ ಸದಸ್ಯ: ದೇವೇಗೌಡರ ಕುಟುಂಬದ ವಿರುದ್ಧ ಕಿಡಿ21-08-2018

ಮಂಡ್ಯ: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ಬಿಜೆಪಿ ಪಕ್ಷದ ಮಾಜಿ ವಿಧಾನ ಪರಿಷತ್ ಸದಸ್ಯ ಅಶ್ವಥನಾರಾಯಣ ಹರಿಹಾಯ್ದಿದ್ದಾರೆ. ಮಂಡ್ಯದ ಮದ್ದೂರಿನಲ್ಲಿ ಮಾತನಾಡಿದ ಅವರು,  ದೇವೇಗೌಡರ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ದೇವೇಗೌಡರು ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡಬೇಕೆಂದು ಕುಟುಂಬದ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಜೊತೆ ಹೋಗಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರನ್ನು ನೀಚ ಮುಖ್ಯಮಂತ್ರಿ ಎಂದು ದೇವೇಗೌಡರು ಜರಿದಿದ್ರು. ಆದರೆ, ಇಂದು ಕಾಂಗ್ರೆಸ್ ಜೊತೆ ಹೋಗಿದ್ದಾರೆ. ಕಾಂಗ್ರೆಸ್ ಜೊತೆ ಹೋಗಿದ್ದರೂ ಸರಿಯಾಗಿ ಆಡಳಿತ ನಡೆಸುತ್ತಿಲ್ಲ ಎಂದು ಟೀಕಿಸಿದ್ದಾರೆ.

'ನಿನ್ನೆ ರೇವಣ್ಣ ಬಿಸ್ಕೆಟ್ ಪೊಟ್ಟಣಗಳನ್ನು ಸಂತ್ರಸ್ತರಿಗೆ ಎಸೆದಿದ್ದಾರೆ. ನಾವು ನಾಯಿಗಳಿಗೂ ಆ ರೀತಿ ಎಸೆಯಲ್ಲ. ಪ್ರಾಣಿಗಳಿಗೂ ಗೌರವ ಕೊಡುವ ಜನ ನಾವು. ಮಾತೆತ್ತಿದ್ರೆ ದೇವಸ್ಥಾನ, ನಿಂಬೆಹಣ್ಣು, ಜ್ಯೋತಿಷಿಗಳ ಜೊತೆ ತಿರುಗುವ ದೇವೇಗೌಡರ ಕುಟುಂಬದವರು ಆಹಾರ ಪೊಟ್ಟಣ ಎಸೆದಿದ್ದಾರೆ. ಮುಖ್ಯಮಂತ್ರಿಗಳು ಅದನ್ನ ಡಿಫೆಂಡ್ ಮಾಡಿಕೊಂಡಿದ್ದಾರೆ.

ರೇವಣ್ಣನ ಮಗ ಇನ್ನೂ ಬೆಳೆಯುವ ಒಬ್ಬ ಕೂಸು. ಆ ಮನುಷ್ಯ ನೆರೆ ಸಂತ್ರಸ್ತರ ಬಳಿ ಹೋಗದೆ ಇರುವವರು ಈ ರೀತಿ ಮಾತನಾಡುತ್ತಾರೆ ಅಂತಿದ್ದಾರೆ. ಅಂದರೆ ಹೋಗದೇ ಇರುವವರು ಇವರು ಏನು ತಪ್ಪು ಮಾಡಿದರೂ ಒಪ್ಪಿಕೊಳ್ಳಬೇಕು ಎಂಬ ರೀತಿ ರಾಜಕೀಯದಲ್ಲಿ ಮಗನನ್ನು ಬೆಳೆಸಿದ್ದಾರೆ. ದೇವೇಗೌಡರು ಅವನನ್ನು ಎಂಪಿ ಮಾಡಲು ಹೊರಟಿದ್ದಾರೆ. ಈ ರೀತಿ ಬೇಜವಾಬ್ದಾರಿಯಾಗಿ ದೇವೇಗೌಡರ ಕುಟುಂಬ ನಡೆದುಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

MLC Ashwath Narayan ದೇವೇಗೌಡರ ಆಕ್ರೋಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ