ವಿಜಯಪುರದಲ್ಲೂ ಹೆಚ್ಚಾಯ್ತು ಸರಗಳ್ಳರ ಹಾವಳಿ

chain snatch

21-08-2018

ವಿಜಯಪುರ: ಸರಗಳ್ಳರ ಹಾವಳಿ ವಿಜಯಪುರದಲ್ಲೂ ಹೆಚ್ಚಾಗಿದ್ದು, ಇಂದೂ ಕೂಡ ಹಾಡಹಗಲೇ ಮಹಿಳೆಯೊಬ್ಬರ ಚಿನ್ನದ ಸರ ಕಸಿದಿದ್ದಾರೆ ದುಷ್ಕರ್ಮಿಗಳು. ನಗರದ ಕೆ.ಹೆಚ್.ಬಿ ಕಾಲೋನಿ ನಿವಾಸಿ ಅಲಕಾ ಅಜರೇಕರ ಎಂಬುವರು ಸರ ಕಳೆದುಕೊಂಡ ಮಹಿಳೆ. ತನ್ನ ಮಗಳೊಂದಿಗೆ ರಸ್ತೆಯಲ್ಲಿ ಹೋಗುತ್ತಿದ್ದ ಅಲಕಾ ಹಿಂದಿನಿಂದ ಬಂದು ಕತ್ತಿಗೆ ಕೈಹಾಕಿ ಚಿನ್ನದ ಸರ ಎಗರಿಸಿದ್ದಾರೆ. ಕಳ್ಳತನದ ದೃಶ್ಯಗಳು ಅಲ್ಲೆ ಮನೆಯೊಂದರ ಮುಂದಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಾಗಠಾಣ ಶಾಸಕ ದೇವಾನಂದ ಚವ್ಹಾಣ ಮನೆಯ ಬಳಿಯೇ ಅಲಕಾ ಅಜರೇಕರ್ ಅವರ ಮನೆಯೂ ಇದ್ದು, ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಸಂಬಂಧಿತ ಟ್ಯಾಗ್ಗಳು

chain snatch Vijayapura ನಾಗಠಾಣ ಮಹಿಳೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ