'ಮುಂದಿನ ವಾರ ಮತ್ತೊಮ್ಮೆ ಕೊಡಗಿಗೆ ಸಿಎಂ ಭೇಟಿ'21-08-2018

ಮಡಿಕೇರಿ: ಭೀಕರ ಪ್ರವಾಹಕ್ಕೆ ತುತ್ತಾಗಿರುವ ಕೊಡಗಿಗೆ ಮುಖ್ಯಮಂತ್ರಿಗಳು ಎಲ್ಲಾ ರೀತಿಯ ಸಹಕಾರವನ್ನು ಜಿಲ್ಲಾಡಳಿತಕ್ಕೆ ನೀಡುತ್ತಿದ್ದಾರೆ. ಮುಂದಿನ ವಾರ ಮತ್ತೆ ಸಿಎಂ ಮಡಿಕೇರಿಗೆ  ಭೇಟಿ ನೀಡಲಿದ್ದಾರೆ ಎಂದು ಮಡಿಕೇರಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.  

ಮಡಿಕೇರಿಯಲ್ಲಿ ಪ್ರವಾಹ ಕುರಿತಂತೆ ಮಾತನಾಡಿದ ಸಚಿವ ಸಾ.ರಾ.ಮಹೇಶ್, 'ಈಗಾಗಲೇ ಬೇಡಿಕೆಗೆ ಅನುಗುಣವಾಗಿ ಸ್ಥಳೀಯ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. 4000 ಜನರನ್ನು ಎಲ್ಲರ ಸಹಕಾರದಿಂದ ಪರಿಹಾರ ಕೇಂದ್ರಕ್ಕೆ ದಾಖಲಿಸಲಾಗಿದೆ. ಅವರ ಜೀವನ ರೂಪಿಸಲು ಸರ್ಕಾರ ಬದ್ಧವಾಗಿದೆ. ಕೊಡಗಿನ‌ ಜನತೆಯೊಂದಿಗೆ ಎಲ್ಲರೂ ಇದ್ದೇವೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.

ಒಂದು ವೇಳೆ ಆಹಾರ ಪೂರೈಕೆಯಲ್ಲಿ ಲೋಪ ಕಂಡುಬಂದರೆ ಗಮನಕ್ಕೆ ತಂದಲ್ಲಿ ಸೂಕ್ತ‌ ಕ್ರಮ ಕೈಗೊಳ್ಳುವುದಾಗಿಯೂ, ತನ್ನ ಒಂದು ತಿಂಗಳ ವೇತನವನ್ನು ರಿಲೀಫ್ ಫಂಡ್ ಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ದೂರವಾಣಿ ಮೂಲಕ ಸಂಪರ್ಕಿಸಿದ ಎಲ್ಲರನ್ನು ರಕ್ಷಿಸಲಾಗಿದೆ. ಜೋಡುಪಾಲ ಕಡೆಗೆ ಮತ್ತೆ ರಕ್ಷಣಾ ಕಾರ್ಯ ನಡೆಯುತ್ತಿದೆ ಕಾಣೆಯಾದವರ ಬಗ್ಗೆ ಮಾಹಿತಿ ನೀಡುವಂತೆ ಪಂಚಾಯಿತಿಗಳಿಗೆ ಸೂಚಿಸಲಾಗಿದೆ' ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ