ಏಷ್ಯನ್ ಗೇಮ್ಸ್: ವಿನೇಶಾ ಪೋಗಟ್ ಐತಿಹಾಸಿಕ ಸಾಧನೆ

Asian Games: Vineesh Pogat Historical Performance

21-08-2018

ಪಾಲೆಂಬಂಗ್‌: ಏಷ್ಯನ್‌ ಕ್ರೀಡಾಕೂಟದಲ್ಲಿ ನಿನ್ನೆ ನಡೆದ ಮಹಿಳೆಯರ 50.ಕೆ.ಜಿ ವಿಭಾಗದ ಕುಸ್ತಿಯಲ್ಲಿ ಭಾರತದ ವಿನೇಶಾ ಪೋಗಟ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅಂತಿಮ ಹಣಾಹಣಿಯಲ್ಲಿ 6–2 ಪಾಯಿಂಟ್ ನಿಂದ ಜಪಾನ್‌ನ ಯೂಕಿ ಐರಿ ಅವರನ್ನು ಮಣಿಸಿ ಮಹಿಳೆಯರ 50.ಕೆ.ಜಿ ವಿಭಾಗದ ಕುಸ್ತಿಯಲ್ಲಿ ಚಿನ್ನ ಗೆದ್ದಿದ್ದಾರೆ. ಇದು ಈ ಬಾರಿಯ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರದ ಗೆದ್ದ ಮೊದಲ ಚಿನ್ನವಾಗಿದೆ. ಮೊದಲಾರ್ಧದಲ್ಲಿ ರಕ್ಷಣೆಗೆ ಒತ್ತು ನೀಡಿದ ಅವರು, ದ್ವಿತೀಯಾರ್ಧದಲ್ಲಿ ರಕ್ಷಣೆ ಮತ್ತು ಆಕ್ರಮಣದ ಮೂಲಕ ಕೊನೆಯ ಒಂದು ನಿಮಿಷದಲ್ಲಿ ಎರಡು ಪಾಯಿಂಟ್ ಗೆದ್ದು, ಗೆಲುವಿನ ನಗೆ ಬೀರಿದರು.


ಸಂಬಂಧಿತ ಟ್ಯಾಗ್ಗಳು

asian games vinesh phogat ಐತಿಹಾಸಿಕ ದ್ವಿತೀಯಾರ್ಧ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ