ಕೊಡಗಲ್ಲಿ ತಗ್ಗಿತು ಮಳೆ: ರಕ್ಷಣಾ ಕಾರ್ಯ ಮುಂದುವರಿಕೆ

Rainfall in Kodagu decrease: Continuation of rescue operation

21-08-2018

ಮಡಿಕೇರಿ: ಭಯಂಕರ ಮಳೆಗೆ ನಲುಗಿರುವ ಕೊಡಗಿನಲ್ಲಿ ಇದೀಗ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದರೂ, ಸಧ್ಯ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಸ್ವಲ್ಪ ತಗ್ಗಿದೆ. ಆದರೂ ಇಂದು ಬೆಳಿಗ್ಗೆಯಿಂದಲೇ ಮಲೆ ಕೊಂಚ ಬಿರುಸುಗೊಳ್ಳುತ್ತಿತ್ತು. ಹಾರಂಗಿ ಜಲಾಶಯದ ಹೊರ ಹರಿವಿನ ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಜಲಾಶಯಕ್ಕೆ 14904 ಕ್ಯೂಸೆಕ್ ನೀರು ಹರಿದು ಬರುತ್ತಿರುವ ಹಿನ್ನೆಲೆ, ನದಿಗೆ 8118 ಕ್ಯೂಸೆಕ್ ಬಿಡುಗಡೆ ಮಾಡಲಾಗಿದೆ. ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಎಸ್.ಪಾಟೀಲ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಸಂತ್ರಸ್ತರಿಗೆ ಪರಿಹಾರ ನೀಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ ಸಚಿವ ಶಿವಾನಂದ.

ಎನ್‌.ಡಿ.ಆರ್.ಎಫ್ ತಂಡದಿಂದ ರಕ್ಷಣಾ ಕಾರ್ಯ ಮುಂದುವರಿದಿದೆ, ತಾಲ್ಲೂಕಿನ ಮಣ್ಣಂಗೇರಿ, ಜೋಡಪಾಲ ಸುತ್ತಮುತ್ತ ಇದೀಗ ಕಾರ್ಯಾಚರಣೆ ನಡೆಯುತ್ತಿದೆ. ಇಲ್ಲಿನ ನಿವಾಸಿಗಳಾಗಿದ್ದ ಅಸ್ಸಾಂ ಮೂಲದ ಕಾರ್ಮಿಕರಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.

ಕೊಡಗಿನ ಪ್ರವಾಹಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಕರುನಾಡು ಮಿಡಿಯುತ್ತಿದೆ. ಆದರೆ ಸಂತ್ರಸ್ತರಿಗೆ ನೆರವಿಗೆಂದು ಕಳುಹಿಸಿಕೊಡಲಾಗಿದ್ದ ಸಾಮಗ್ರಿಗಳನ್ನೂ ಕದಿಯುವ ವಿಕೃತ ಮನಸ್ಥಿಗಳು ಇದನ್ನೂ ದುರುಪಯೋಗ ಪಡಿಸಿಕೊಳ್ಳಲು ಮುಂದಾಗಿದ್ದು ಪೊಲೀಸರು ತಡೆದಿದ್ದಾರೆ.

ರಾಜ್ಯದ ವಿವಿಧೆಡೆಯಿಂದ ಆಗಮಿಸುತ್ತಿವೆ ಲೋಡ್ ಗಟ್ಟಲೆ ಪರಿಹಾರ ಸಾಮಾಗ್ರಿಗಳು, ಜಿಲ್ಲೆಗೆ ಆಗಮಿಸುತ್ತಿದ್ದಂತೆ ವಾಹನಗಳ ದಿಕ್ಕು ತಪ್ಪಿಸುತ್ತಿರುವ ಕಿಡಿಗೇಡಿಗಳು ಅದನ್ನು ದುರುಪಯೋಗ ಪಡಿಸಿಕೊಳ್ಳಲು ಯತ್ನಿಸಿದ್ದಾರೆ. 2 ಲೋಡ್ ಲಾರಿಗಳನ್ನು ಮೂರ್ನಾಡುವಿನ ಪಾಲೆಮಾಡುವಿಗೆ ಕಳುಹಿಸುವ ಯತ್ನ ನಡೆಸಿದ್ದರು. ಆಗ ಪೊಲೀಸರು ಇದನ್ನು ತಡೆದಿದ್ದಾರೆ. 2 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

kodagu flood ಸಾಮಾಗ್ರಿ ಎನ್‌.ಡಿ.ಆರ್.ಎಫ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ