ಶಿರೂರು ಶ್ರೀಗಳ ನಿಧನ :ಎರಡು-ಮೂರು ದಿನಗಳಲ್ಲಿ ಎಫ್.ಎಸ್.ಎಲ್ ವರದಿ!

The death of Shirur Srees: FSL report in two-three days!

21-08-2018

ಉಡುಪಿ: ಶಿರೂರು ಶ್ರೀಗಳ ನಿಗೂಢ ಸಾವಿಗೆ ಸಂಬಂಧಿಸಿದಂತೆ ಬಹುದಿನಗಳಿಂದ ಕಾಯುತ್ತಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಈ ವಾರ ಬರಲಿದೆ. ಶಿರೂರು ಮಠದ ಲಕ್ಷ್ಮೀವರ ತೀರ್ಥರು ಸಾವನ್ನಪ್ಪಿ ಒಂದು ತಿಂಗಳೇ ಕಳೆದಿದೆ. ಪ್ರಾಥಮಿಕ ಮರಣೋತ್ತರ ಪರೀಕ್ಷೆ ವರದಿ ಈಗಾಗಲೇ ಕೈಸೇರಿದ್ದು, ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇನ್ನೆರಡು ಮೂರು ದಿನಗಳಲ್ಲಿ ಎಫ್.ಎಸ್.ಎಲ್ ವರದಿ ಪೊಲೀಸರ ಕೈ ಸೇರುವ ನಿರೀಕ್ಷೆ ಇದೆ. ಬಳಿಕವಷ್ಟೇ ಶಿರೂರು ಶ್ರೀಗಳ ಸಾವಿನ ನಿಖರ ಕಾರಣ ಬಹಿರಂಗಗೊಳ್ಳಲಿದೆ. ಇದೆಲ್ಲವೂ ಅಂದುಕೊಂಡಂತೆಯೇ ಆದರೆ, ಶಿರೂರು ಶ್ರೀ ಆರಾಧನೆ ಸಹಿತ ವಿವಿಧ ಹೋಮಗಳು ಸೋದೆ ಶ್ರೀಗಳ ನೇತೃತ್ವದಲ್ಲಿ ನಡೆಯಲಿದೆ. ಹಾಗೆಯೇ ಕಳೆದ ಒಂದು ತಿಂಗಳಿನಿಂದ ಸ್ಥಗಿತಗೊಂಡಿದ್ದ ಶಿರೂರು ಮೂಲ ಮಠದ ರಂಗ ಪೂಜೆಯೂ ಸಾರ್ವಜನಿಕರು ಭಾಗವಹಿಸುವಿಕೆಯೊಂದಿಗೆ ನಡೆಯಲಿದೆ. ಸಾವಿನ ಬಳಿಕ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಮೂಲ ಮಠಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತು. ಒಟ್ಟಾರೆ ಶಿರೂರು ಶ್ರೀಗಳ ಸಾವಿನ ಹಿಂದಿರುವ ಹಲವು ಅನುಮಾನಗಳಿಗೆ ಎಫ್.ಎಸ್.ಎಲ್ ವರದಿ ಬಂದ ನಂತರವೇ ದೊರೆಯಲಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ