ವೈಯಕ್ತಿಕವಾಗಿ ನನಗೆ ತುಂಬಾ ನೋವಾಗಿದೆ !

Kannada News

31-05-2017 275

ಬೆಂಗಳೂರು:- ರಾಜ್ ಕುಟುಂಬ ತಮ್ಮ ನಿವಾಸದ ಸಮೀಪದಲ್ಲೇ ಇದ್ದುದರಿಂದ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಹಾಗೂ ತಮ್ಮ ಕುಟುಂಬ ಪರಸ್ಪರ ಸುಖ:ದುಖ ಹಂಚಿಕೊಳ್ಳುತ್ತಿತ್ತು. ಆದರೆ ಈಗ ಅವರ ನಿಧನದಿಂದ ತಮ್ಮ ಕುಟುಂಬಕ್ಕೆ ವೈಯಕ್ತಿಕ ನಷ್ಟವಾದಂತಾಗಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್‍ನ, ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ನೋವು ತೋಡಿಕೊಂಡಿದ್ದಾರೆ. ಪಾರ್ವತಮ್ಮ ಅವರ ಅಂತಿಮ ದರ್ಶನ ಪಡೆದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಾರ್ವತಮ್ಮ ಮತ್ತು ನಾವು ಪರಸ್ಪರ ಭೇಟಿಯಾಗುತ್ತಿದ್ದೆವು. ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದೆವು. ತಮ್ಮ ಮನೆಗೆ ಯಾರೇ ಬಂದರು ಅತ್ಯಂತ  ಪ್ರೀತಿ ಮತ್ತು ಕರುಣೆಯಿಂದ ನಡೆದುಕೊಳ್ಳುತ್ತಿದ್ದರು. ವರನಟ ಡಾ.ರಾಜ್‍ ಕುಮಾರ್ ಅವರ ಹಿಂದೆ ಪಾರ್ವತಮ್ಮ ಅವರ ಶ್ರಮವಿತ್ತು. ಪಾರ್ವತಮ್ಮ ರಾಜ್‍ ಕುಮಾರ್ ಅವರು ಚಿತ್ರರಂಗಕ್ಕೆ ಮಾದರಿಯಾಗಿದ್ದರು. ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆ. ನನಗೆ ವೈಯಕ್ತಿಕವಾಗಿ ತುಂಬಾ ನೋವಾಗಿದೆ ಎಂದರು. ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅನಂತುಮಾರ್ ಅವರು, ಕನ್ನಡ ನಾಡಿನ ಹಿರಿಮೆಯನ್ನು ಎತ್ತಿ ಹಿಡಿದ ರಾಜ್ ನೇತೃತ್ವದ ಗೋಕಾಕ್ ಚಳವಳಿಯ ಹಿಂದೆ, ಪರಭಾಷಿಕ ಚಿತ್ರಗಳಲ್ಲಿ ನಟಿಸದೆ ಕನ್ನಡವನ್ನೇ ಉಸಿರಾಗಿಸಿಕೊಳ್ಳುವ ಅವರ ನಿರ್ಧಾರದ ಹಿಂದೆ ಶ್ರೀಮತಿ ಪಾರ್ವತಮ್ಮ ರಾಜ್‍ಕುಮಾರ್ ಇದ್ದರು ಎಂದರು. ಪತ್ನಿ ತೇಜಸ್ವಿನಿ ಅವರ ಜತೆ ಪಾರ್ವತಮ್ಮ ಅವರ ಅಂತಿಮ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್‍ಕುಮಾರ್ ಅವರ ಕುಟುಂಬದ ಜತೆ 40 ವರ್ಷಗಳಿಂದ ನಮ್ಮ ಬಾಂಧವ್ಯ ಇದೆ. ನಿರ್ಮಾಪಕಿಯಾಗಿ  ಪಾರ್ವತಮ್ಮ ಅವರ ಸೇವೆ ಅಮೋಘವಾದದ್ದು ಎಂದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ