ನೆರೆ ಹಾವಳಿ ಸಂತ್ರಸ್ತರ ನೆರವಿಗೆ ಕಾಂಗ್ರೆಸ್

Congress help kodagu flood affected people

20-08-2018

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯಸಭಾ ಸದಸ್ಯ. ಕೆ.ಸಿ.ರಾಮಮೂರ್ತಿ ಕಾರ್ಯಾಧ್ಯಕ್ಷ ಖಂಡ್ರೆ, ಸಚಿವ ಜಮೀರ್ ಅಹ್ಮದ್, ಮೇಯರ್ ಸಂಪತ್ ರಾಜ್, ಕೆ.ಸಿ.ಕೊಂಡಯ್ಯ, ಕೇರಳ,ಕೊಡಗಿನಲ್ಲಿ ನೆರೆ ಹಾವಳಿ ಹಿನ್ನೆಲೆಯಲ್ಲಿ ಸಂತ್ರಸ್ತರ ನೆರವಿಗೆ ಧಾವಿಸುವಂತೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಹೀಗಾಗಿ ಸಹಾಯ ಹಸ್ತಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.

ಕೇರಳಕ್ಕೆ 500 ಕ್ವಿಂಟಾಲ್ ಅಕ್ಕಿ, 100ಕ್ವಿಂಟಾಲ್ ಸಕ್ಕರೆ, 50 ಸಾವಿರ ಮೌಲ್ಯದ ಸಾಂಬಾರ್ ಪೌಡರ್, 8 ಸಾವಿರ ಬ್ಲಾಂಕೆಟ್ ಕಳಿಸುತ್ತಿದ್ದೇವೆ. ಜೊತೆಗೆ ಕೊಡಗಿಗೂ ಇಷ್ಟೇ ಸಾಮಾಗ್ರಿ ನೀಡುತ್ತಿದ್ದೇವೆ ಎಂದು ಹೇಳಿದರು. ಬೆಳಿಗ್ಗೆಯಷ್ಟೇ ರಾಮಲಿಂಗಾರೆಡ್ಡಿ 15 ಟ್ರಕ್ ಸಾಮಗ್ರಿ ಕಳಿಸಿದ್ದಾರೆ. ಈಗ ನಾವು ಆಹಾರ ಸಾಮಗ್ರಿ ಕಳಿಸುತ್ತಿದ್ದೇವೆ. ಈಗಾಗಲೇ ಸರ್ಕಾರದಿಂದಲೂ ನೆರವು ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

ನೆರೆಪೀಡಿತ ಪ್ರದೇಶಗಳಿಗೆ ಸಚಿವರ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ, ಗೃಹ ಸಚಿವರು ಇಂದು ಭೇಟಿ ನೀಡಿದ್ದಾರೆ. ಯು.ಟಿ.ಖಾದರ್ ಅಲ್ಲಿಯೇ ಉಸ್ತುವಾರಿ ನೋಡುತ್ತಿದ್ದಾರೆ. ನಾವು 23ರಂದು ಭೇಟಿ ನೀಡುತ್ತೇವೆ. ಎಲ್ಲರೂ ಒಟ್ಟಿಗೆ ಹೋದರೆ ಅಲ್ಲಿ ಡಿಸ್ಟರ್ಬ್ ಆಗಲಿದೆ. ಅಲ್ಲಿ ಇನ್ನೂ ಗಂಭೀರ ಪರಿಸ್ಥಿತಿ ಮುಂದುವರಿದಿದೆ. ಎಲ್ಲರೂ ಹೋದರೆ ಅಲ್ಲಿ ಇನ್ನಷ್ಟು ತೊಂದರೆಯಾಗಲಿದೆ. ಹೀಗಾಗಿ ಪರಿಸ್ಥಿತಿ ನೋಡಿಕೊಂಡು ಭೇಟಿ ನೀಡುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.


ಸಂಬಂಧಿತ ಟ್ಯಾಗ್ಗಳು

KPCC Dinesh Gundu Rao ನೆರೆಪೀಡಿತ ಕ್ವಿಂಟಾಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ