ಸ್ಟ್ರೀಟ್ ಲೈಟ್ ಕಂಬ ಬಿದ್ದು ಬಾಲಕಿ ದುರ್ಮರಣ

street light pole fell on a girl: immediately she died

20-08-2018

ಬೆಂಗಳೂರು: ಪುಟ್‍ಪಾತ್ ಮೇಲಿದ್ದ ಸ್ಟ್ರೀಟ್ ಲೈಟ್ ಕಂಬ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯೊಬ್ಬಳು ಮೃತಪಟ್ಟಿರುವ ದರುಣ ಘಟನೆ ಕಾಡುಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ದಿನ್ನೂರು ಕ್ರಾಸ್ ಬಳಿ ನಡೆದಿದೆ.

ವರ್ತೂರಿನ 7ನೇ ತರಗತಿ ವಿದ್ಯಾರ್ಥಿನಿ ಯುವರಾಣಿ (12) ಮೃತ ಬಾಲಕಿಯಾಗಿದ್ದಾಳೆ. ತಂದೆ ಹರೀಶ್ ಜೊತೆ ಬೈಕ್‍ನಲ್ಲಿ ಹೊಸಕೋಟೆಯಲ್ಲಿನ ಸಂಬಂಧಿಕರ ಮನೆಯ ಗೃಹಪ್ರವೇಶಕ್ಕೆ ಭಾನುವಾರ ಹೋಗಿದ್ದ ಯುವರಾಣಿ ಅಲ್ಲಿಂದ ವಾಪಸ್ ಬರುತ್ತಿದ್ದಾಗ ಮಾರ್ಗ ಮಧ್ಯೆ ದಿನ್ನೂರು ಕ್ರಾಸ್ ಬಳಿ ತುಕ್ಕು ಹಿಡಿದಿದ್ದ ಸ್ಟ್ರೀಟ್ ಲೈಟ್ ಕಂಬವು ಯುವರಾಣಿ ಮುಖದ ಮೇಲೆ ಬಲವಾಗಿ ಬಿದ್ದಿದೆ.

ಕೆಳಗೆಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಸ್ಥಳೀಯರ ನೆರವಿನೊಂದಿಗೆ ಹತ್ತಿರದ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದ್ದು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ತಂದೆ ಹರೀಶ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ತುಕ್ಕು ಹಿಡಿದಿದ್ದ ಕಂಬವನ್ನು ಬದಲಿಸಿ ಹೊಸ ಕಂಬ ಅಳವಡಿಸದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

ಬಾಲಕಿಯ ಮೆಲೆ ಕಂಬ ಬೀಳಲು ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೆ ಕಾರಣ ಎಂದು ಪೋಷಕರು ಕಾಡುಗುಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

death foot path ಪುಟ್‍ ಪಾತ್ ಸ್ಟ್ರೀಟ್ ಲೈಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ