ನಾವೇ ಸರ್ಕಾರದ ರೀತಿ ಕೆಲಸ ಮಾಡಬೇಕಿದೆ: ರವಿಚಂದ್ರನ್

We need to work as government: Ravichandran

20-08-2018 260

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಮಲ್ಟಿ ಸ್ಟಾರರ್ ಸಿನೆಮಾ ಸೆಟ್ಟೇರುತ್ತಿರುವ ವಿಚಾರ ಭಾರೀ ಸದ್ದು ಮಾಡುತ್ತಿದೆ. ಮೊದಲ ಬಾರಿಗೆ ರಿಯಲ್ ಸ್ಚಾರ್ ಉಪೇಂದ್ರ ಮತ್ತು ಕ್ರೇಜಿಸ್ಟಾರ್ ರವಿ ಚಂದ್ರನ್ ಅವರು ನಟಿಸುತ್ತಿರುವ 'ರವಿ ಚಂದ್ರ' ಸಿನೆಮಾದ ಮುಹೂರ್ತ ಇಂದು ನೆರವೇರಿತು.

ದೊಡ್ಡಗಣಪತಿ ದೇವಸ್ಥಾನದಲ್ಲಿ ಮುಹೂರ್ತ ಕಾರ್ಯಗಳನ್ನೆಲ್ಲಾ ಮುಗಿಸಿ, ನಂತರದಲ್ಲಿ ಮಾತನಾಡಿದ ನಟ ರವಿ ಚಂದ್ರನ್, ಮಡಿಕೇರಿ ಪ್ರವಾಹದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕೊಡಗು ಪ್ರವಾಹ ಸಂತ್ರಸ್ತರಿಗೆ ಸಾಮಾನ್ಯ ಜನರು ಸೇರಿದಂತೆ ಸ್ಯಾಂಡಲ್ ವುಡ್ ನಟರು ಸಹಾಯ ಮಾಡಿದ್ದಾರೆ. ಹಾಗೆಯೇ ಸಹಾಯ ಕಾರ್ಯಗಳು ಮುಂದುವರೆಯುತ್ತಿವೆ. ಮಳೆ ನಿಂತ ಮೇಲೆ ಅಲ್ಲಿ ಬೇಕಾದ ಅಗತ್ಯ ಪರಿಹಾರವನ್ನು ಮಾಡಬೇಕಿದೆ. ಸರ್ಕಾರ ಮಾಡುತ್ತೆ ಅಂತ ಕಾಯುತ್ತ ಕೂರುವುದು ಬೇಡ, ನಾವೇ ಸರ್ಕಾರದ ರೀತಿ ಕೆಲಸ ಮಾಡಬೇಕಿದೆ, ಮಳೆ ನಿಂತ ನಂತರ ಅಲ್ಲಿನ ಜನರಿಗೆ ಒಂದು ಊರು ಕಟ್ಟಿ ಕೊಡೊ ಕೆಲಸ ಆಗಬೇಕು. ಅವರು ತಮ್ಮ ಸಂತೋಷವನ್ನ ಮರಳಿ ಪಡೆಯುವಂತೆ ಆಗಬೇಕು ಎಂದು ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ