ಮಡಿಕೇರಿ ಕುರಿತು ಪ್ರಧಾನಿಗಳು ಗಮನ ಕೊಡಲಿಲ್ಲ: ಡಿ.ಕೆ.ಸುರೇಶ್

Prime Minister does not pay attention to Madikeri: DK Suresh

20-08-2018

ಬೆಂಗಳೂರು: ಕೊಡಗಿನಲ್ಲಿ ಮಹಾಮಳೆಗೆ ಸಾಕಷ್ಟು ಜೀವ, ಆಸ್ತಿ ಹಾನಿಯಾಗಿದೆ. ಪ್ರಧಾನಿ ಮೋದಿಯವರು ಕೇರಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಆದರೆ, ವೀರ ಯೋಧರ ತಾಣ ಕೊಡಗಿಗೆ ಪ್ರಧಾನಿಗಳು ಬರಲೇ ಇಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಬೇಸರ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನಲ್ಲೂ ಸಹ ಪ್ರವಾಹದಿಂದ ಅಪಾರ ಹಾನಿಯಾಗಿದ್ದು, ಕೊಡಗಿನ ಪಕ್ಕದಲ್ಲೇ ಇರುವ ಕೇರಳಕ್ಕೆ ಪ್ರಧಾನಿಗಳು ತೆರಳಿದರು ವೈಮಾನಿಕ ಸಮೀಕ್ಷೆ ನಡೆಸಿದರು. ಆದರೆ, ಕೊಡಗಿನ ಕಡೆ ಗಮನ ಕೊಡಲಿಲ್ಲ. ಬಿಜೆಪಿ ನಾಯಕರು ಕೇವಲ ಮಾತನಾಡುತ್ತಾರಷ್ಟೇ ಎಂದು ಡಿ.ಕೆ ಸುರೇಶ್ ಟೀಕೆ ಮಾಡಿದ್ದಾರೆ. ಕೊಡಗು ಹಾನಿ ಕುರಿತು ಕೇಂದ್ರ ಸರ್ಕಾರಕ್ಕೆ ರಾಜ್ಯ ಬಿಜೆಪಿ ನಾಯಕರು ಮನವರಿಕೆ ಮಾಡಲಿ. ಎರಡೂ ರಾಜ್ಯಗಳ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಮಲತಾಯಿ ಧೋರಣೆ ನಡೆದಿದೆ. ಕೇರಳ ಅನಾಹುತವನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಘೋಷಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು. 

ಕೊಡಗಿನಲ್ಲಿ ರಾಜ್ಯ ಸರ್ಕಾರ ಎಲ್ಲ ಪರಿಹಾರ ಕ್ರಮಗಳನ್ನೂ ಕೈಗೊಂಡಿದೆ. ಮೊದಲು ಕೊಡಗಿನ ಜನರ ರಕ್ಷಣೆ ಆಗಬೇಕಿದೆ, ಆ ನಂತರ ಕೇಂದ್ರದಿಂದ ಹೆಚ್ಚಿನ ಪರಿಹಾರ ತರುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು.

 


ಸಂಬಂಧಿತ ಟ್ಯಾಗ್ಗಳು

National disaster D.K.Suresh ವೀರ ಯೋಧರ ತಾಣ ಮಲತಾಯಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ