ಮಡಿಕೇರಿಗೆ ಇಂದು ಡಿಸಿಎಂ ಭೇಟಿ

DCM parameshwar to visit kodagu today

20-08-2018

ಮಡಿಕೇರಿ: ಜಿಲ್ಲೆಯ ನದಿ-ತೊರೆಗಳಲ್ಲಿ ನೀರಿನ ಪ್ರಮಾಣ ಇಳಿಮುಖವಾಗುತ್ತಿದ್ದು, ಕೊಡಗಿನಲ್ಲಿ ಮತ್ತೆ ಮಳೆ ಸುರಿಯುತ್ತಿದೆ. ಹಾರಂಗಿ ಜಲಾಶಯದಿಂದ 22 ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ. ಕುಶಾಲನಗರದ ಸುತ್ತಮುತ್ತ ಪ್ರದೇಶಗಳಲ್ಲಿ ಪ್ರವಾಹದ ನೀರು ನಿಧಾನವಾಗಿ ತಗ್ಗುತ್ತಿದೆ. ಮಡಿಕೇರಿ-ವಿರಾಜಪೇಟೆ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ ಎಂದು ತಿಳಿದು ಬಂದಿದೆ. ಬೇತ್ರಿ ಸೇತುವೆಯಲ್ಲಿಯೂ ಕಾವೇರಿ ನದಿ ನೀರು ಇಳಿಮುಖವಾಗಿದೆ. ಇಂದು ಮಡಿಕೇರಿಗೆ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮಡಿಕೇರಿಗೆ ಆಗಮಿಸಲಿರುವ ಡಿಸಿಎಂ ಪರಮೇಶ್ವರ್ ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Madikeri parameshwar ವಿರಾಜಪೇಟೆ ಕುಶಾಲನಗರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ