ಕೊಕೇನ್ ಮಾರಾಟ ಮಾಡುತ್ತಿದ್ದ ನೈಜೀರಿಯನ್ ಪ್ರಜೆಯ ಬಂಧನ !

Kannada News

31-05-2017 396

ಬೆಂಗಳೂರು:- ಕಾರಿನಲ್ಲಿ ನಗರದ ವಿವಿಧೆಡೆ ಸಂಚರಿಸಿ ಕೊಕೇನ್ ಮಾರಾಟ ಮಾಡುತ್ತಿದ್ದ ಓರ್ವ ನೈಜೀರಿಯನ್ ಪ್ರಜೆಯನ್ನು    ಬಂಧಿಸಿರುವ ಸಿಸಿಬಿ ಪೊಲೀಸರು 6 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ನೈಜಿರಿಯಾದ ಮೈಕಲ್ ಇಯಾಮು(35)ಬಂಧಿತ ಆರೋಪಿ, ಕೊತ್ತನೂರಿನ ಬಿಳಿಶಿವಾಲೆ ಬಳಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಆರೋಪಿಯು ಕೊಕೇನ್ ಬೇರೆಡೆಯಿಂದ ತರಿಸಿಕೊಂಡು ನಗರದ ವಿವಿಧೆಡೆ ಕಾರಿನಲ್ಲಿ ಸಂಚರಿಸಿ ಮಾರಾಟ ಮಾಡುತ್ತಿದ್ದನು. ಖಚಿತ ಮಾಹಿತಿಯ ಮೇಲೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ 6ಲಕ್ಷ ಮೌಲ್ಯದ 20 ಗ್ರಾಂ ಕೊಕೇನ್, 14 ಮೊಬೈಲ್ ಗಳು, ಎರಡು ಪಾಸ್ಪೋರ್ಟ್, ಒಂದು ಟೋಯೋಟಾ ಕಾರು, 3 ಹಾರ್ಡ್ಡಿಸ್ಕ್, ಒಂದು ಐ-ಪಾಡ್ ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ , ಪ್ರಕರಣ ದಾಖಲಿಸಿಕೊಂಡ ಕೊತ್ತನೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ