ಬೆಂಗಳೂರು-ಕೇರಳ ನಡುವೆ ರೈಲು ಸಂಚಾರ ಸ್ಥಗಿತ

all train have canclled to keral from bengaluru due to heavy rain

18-08-2018

ಬೆಂಗಳೂರು: ಕೇರಳದಲ್ಲಿ ಭಾರೀ ಜಲಪ್ರಳಯ ಹಿನ್ನೆಲೆ, ಬೆಂಗಳೂರು-ಕೇರಳ ನಡುವಿನ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಬೆಂಗಳೂರಿಂದ ಕೇರಳಕ್ಕೆ ತೆರಳಬೇಕಾದ ರೈಲುಗಳ ಸಂಚಾರ ಸ್ಥಗಿತಗೊಳಿಸಿರುವುದಾಗಿ ನೈರುತ್ಯ ರೈಲ್ವೆ ಇಲಾಖೆ ತಿಳಿಸಿದೆ. ಕನ್ಯಾಕುಮಾರಿ ಎಕ್ಸ್ ಪ್ರೆಸ್, ಕಣ್ಣೂರು ಎಕ್ಸ್ ಪ್ರೆಸ್, ಎರ್ನಾಕುಲಂ ಎಕ್ಸ್ ಪ್ರೆಸ್ ಸೇರಿದಂತೆ ಹಲವು ರೈಲುಗಳ ಓಡಾಟ ನಿಲ್ಲಿಸಿದೆ ರೈಲ್ವೆ ಇಲಾಖೆ. ಹವಾಮಾನ ವೈಪರೀತ್ಯ ಬದಲಾವಣೆ ಹಿನ್ನೆಲೆ ಸ್ಥಗಿತಗೊಳಿಸಲಾಗಿದ್ದು, ಸಹಜ ಸ್ಥಿತಿಗೆ ಬರುವವಗೆ ಕೇರಳಕ್ಕೆ ರೈಲ್ವೆ ಸಂಚಾರ ಇಲ್ಲ ಎಂಬುದಾಗಿಯೂ, ಪರಿಸ್ಥಿತಿ ಆಧರಿಸಿ ರೈಲು ಸಂಚಾರ ಆರಂಭಿಸುವುದಾಗಿ ನೈರುತ್ಯ ರೈಲ್ವೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.


ಸಂಬಂಧಿತ ಟ್ಯಾಗ್ಗಳು

kerala flood ರೈಲು ಸಂಚಾರ ವೈಪರೀತ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ