ಒಂದೆಡೆ ವೃದ್ಧರ ಅಳಲು, ಮತ್ತೊಂದೆಡೆ ಪುಟ್ಟ ಮಕ್ಕಳ ಆಕ್ರಂದನ...

heavy rain in kodagu and karavali

18-08-2018

ಮಡಿಕೇರಿ: ಮಲೆನಾಡು, ಕರಾವಳಿ ಭಾಗಗಳಲ್ಲಿ ಭೀಕರ ಬಿರುಗಾಳಿ ಸಹಿತ ಭಾರೀ ಮಳೆ ಮುಂದುವರೆದಿದೆ. ಕೊಡಗಿನಲ್ಲಿ ಭಯಂಕರ ಮಳೆಯಾಗುತ್ತಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಆದರೂ ಬಿರುಗಾಳಿಯ ರಭಸ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ.

ಸ್ವಯಂ ಸೇವಕರು ಸೇರಿದಂತೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ ಸಿಬ್ಬಂದಿ ನಿರಂತರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಚೇರಂಬಾಣೆ ಸರ್ಕಾರಿ ಶಾಲೆಯಲ್ಲಿ ಜೋಡುಪಾಲದ 400 ಜನ ಆಶ್ರಯ ಪಡೆದಿದ್ದಾರೆ. ಮನೆ ಕುಸಿದು ಸಂಕಷ್ಟಕ್ಕೆ ಸಿಲುಕಿರುವ ನಿರಾಶ್ರಿತರು ಬೆಟ್ಟಗುಡ್ಡ ಹತ್ತಿ ತಾವಾಗಿಯೇ ಗಂಜಿ ಕೇಂದ್ರ ದತ್ತ ಬರುತ್ತಿದ್ದಾರೆ. ನಿರಾಶ್ರಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಒಂದೆಡೆ ವೃದ್ಧರ ಅಳವು, ಮತ್ತೊಂದೆಡೆ ಪುಟ್ಟ ಮಕ್ಕಳ ಆಕ್ರಂದನ ಮನಕಲುಕುವಂತಿದೆ. ನೆರವಿಗೆ ಹತ್ತಾರು ಸಂಘ ಸಂಸ್ಥೆಗಳು ಮುಂದಾಗಿದ್ದರೂ ಗುಡ್ಡಗಳು ಕುಸಿಯುತ್ತಿರುವುದು, ಬಿರುಗಾಳಿ, ತೀವ್ರ ಮಳೆ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ.


ಸಂಬಂಧಿತ ಟ್ಯಾಗ್ಗಳು

Madikeri Flood ರಕ್ಷಣಾ ಕಾರ್ಯ ಮಲೆನಾಡು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ