ಚಿರತೆ ಮರಿ ಅನುಮಾನಾಸ್ಪದ ಸಾವು!

baby Leopard suspicious death!

17-08-2018

ತುಮಕೂರು: 2 ವರ್ಷದ ಚಿರತೆ ಮರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ. ಕುಣಿಗಲ್ ತಾಲ್ಲೂಕಿನ ಕೆ.ಹೊನ್ನಮಾಚನಹಳ್ಳಿ ಬಳಿಯ ರಾಘವನಹೊಸೂರು ಗ್ರಾಮದ ಬಳಿ ಚಿರತೆ ಮೃತದೇಹ ಪತ್ತೆಯಾಗಿದ್ದು, ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ರಸ್ತೆ ಬದಿಯ ಹಳ್ಳದಲ್ಲಿ ಸತ್ತು ಬಿದ್ದಿದ್ದ ಚಿರತೆ ಮರಿ ಕಂಡ ಸ್ಥಳೀಯರು ಹುಲಿಯೂರು ದುರ್ಗ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪಶುಪಾಲನಾ ಇಲಾಖೆಯ ವೈದ್ಯರು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Leopard baby death ಅರಣ್ಯ ಇಲಾಖೆ ವೈದ್ಯರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ